Sunday, November 24, 2024
ಸುದ್ದಿ

ಡಿ21 ರಿಂದ ಜನವರಿ1 ತನಕ ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿನಲ್ಲಿ 2006ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಮಾತ್ರವಲ್ಲದೆ ರಾಜ್ಯಾದ್ಯಂತ ಹೆಸರುಗಳಿಸಿದ ಈ ಸಂಸ್ಥೆಯು ಜಿಲ್ಲಾದ್ಯಾಂತ ಸುಮಾರು 43 ಶಾಖೆಯನ್ನು ಅರಂಭಿಸಿದೆ.

ಇನ್ನೂ ಈ ಸಂಸ್ಥೆಯಲ್ಲಿ ಸರಿ ಸುಮಾರು 5300ಕ್ಕಿಂತ ಅಧಿಕ ಮಕ್ಕಳು ಯಕ್ಷಗಾನ, ಸಂಗೀತ, ಜಾನಪದ ನೃತ್ಯ,ಚೆಂಡೆ,ನಾಟಕ ಕಲೆ ಇದೇ ತರಹ ಹಲವು ಸಾಂಸ್ಕøತಿಕ ಚಟುವಟಿಕೆಗಳ ತರಬೇತಿ ಪ್ರದರ್ಶನ ನಡೆಸುತ್ತಿದ್ದಾರೆ. ಹಲವಾರು ಯುವ ಪ್ರತಿಭೆಗಳನ್ನು ಕಲಾ ಪ್ರಪಂಚಕ್ಕೆ ಪರಿಚಯಿಸಿದ ಹೆಮ್ಮೆ ಈ ಸಂಸ್ಥೆಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಯಕ್ಷಗಾನ, ಭರತನಾಟ್ಯ, ಸಂಗೀತ, ಜಾನಪದ ಕಲೆ, ನೃತ್ಯ ಚಿತ್ರಕಲೆ ಹಾಗೂ ನಾಟಕ ತರಬೇತಿಯನ್ನು ಎಳೆಯರಿಗೆ ನೀಡಬೇಕು ಈ ಮೂಲಕ ಎಳೆಯ ಪ್ರತಿಭೆಗಳ ಸಾಮಥ್ಯ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕ ಮಿತ್ರರೊಂದಿಗೆ ರೂಪುಗೊಂಡ ಸಂಸ್ಥೆ ಚಿಣ್ಣರಲೋಕ ಮೊಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ ಬಂಟ್ವಾಳ ಈ ಸಂಸ್ಥೆ ಈಗಾಗಲೇ ಹಲವುಕಡೆ ಶಾಖೆಯನ್ನು ಹೊಂದಿದ್ದು ಕಲೆಯ ಅನುಸಾರವಾಗಿ ವಿವಿಧ ತಜ್ಞರಿಂದ ಎಳೆಯ ಮಕ್ಕಳಿಗೆ ತರಬೇತಿಯನ್ನು ನಡೆಸುತ್ತಾ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

2018- 19 ರ ಕರಾವಳಿ ಕಲೋತ್ಸವಕ್ಕೆ ಜನ ಮೆಚ್ಚುಗೆ.
ಕಳೆದ ಬಾರಿ ಡಿಸೆಂಬರ್ ನಲ್ಲಿ ಬಿಸಿ ರೋಡ್ ಗಾಣದಪಡ್ಪು ಬಳಿ ಕರಾವಳಿ ಕಲೋತ್ಸವವೆಂಬ ವಿಭಿನ್ನ ಕಾರ್ಯಕ್ರಮವನ್ನು ಸುಮಾರು 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗಿತ್ತು. ಅಲ್ಲದೆ ಬೇರೆ ಬೇರೆ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಹಲವು ಕಲಾ ತಂಡಗಳು ಭಾಗವಹಿಸಿದ್ದವು ಕರಾವಳಿ ಕಲೊತ್ಸವ ಕಾರ್ಯಕ್ರಮ ಬಂಟ್ವಾಳ ತಾಲೂಕಿನದ್ಯಾಂತವಲ್ಲದೆ, ದಕ್ಷಿಣ ಕನ್ನಡ ಜಿಲ್ಲಾದ್ಯಾಂತ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿ ನಡೆಯಲಿದೆ ಕರಾವಳಿ ಕಲೋತ್ಸವ 2019_20 ವಿನೂತನ ಕಾರ್ಯಕ್ರಮಕ್ಕೆ ಸಿದ್ದತೆಗಳು ಅರಂಭ. ಈ ಬಾರಿಯ ಕಲೋತ್ಸವ 12 ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 21ರಿಂದ ಜನವರಿ 1 ತನಕ ಬಂಟ್ವಾಳ ಜನತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ಚಿಣ್ಣರಲೋಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ª