ಸೋಷಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ಆಪ್‌ನ ವ್ಯಾಮೋಹ ಹೆಚ್ಚುತ್ತಿದೆ. ವಾಸ್ತವವಾಗಿ ಜನರು ಈ ಅಪ್ಲಿಕೇಶನ್ ಮೂಲಕ ಜನಪ್ರಿಯತೆಯನ್ನು ಪಡೆಯುತ್ತಿದ್ದಾರೆ.
ಇದು ಉತ್ತಮ ಮನರಂಜನಾ ವೇದಿಕೆಯಾಗಿದೆ. ಜನರು ಟಿಕ್ ಟಾಕ್ ಅಪ್ಲಿಕೇಶನ್ ಇಷ್ಟಪಡಲು ಇದು ಮುಖ್ಯ ಕಾರಣವಾಗಿದೆ. ಆದಾಗ್ಯೂ ಈಗ ಟಿಕ್‌ಟಾಕ್ ಬಳಕೆದಾರರು ಈ ಅಪ್ಲಿಕೇಶನ್‌ನಿಂದ ಹಣ ಗಳಿಸುವ ಅವಕಾಶ ಪಡೆಯತ್ತಿದ್ದಾರೆ.
ಅನೇಕ ದೊಡ್ಡ ಕಂಪನಿಗಳು ಮತ್ತು ಬ್ರ್ಯಾಂಡ್‌ಗಳು ಈಗ ಟಿಕ್‌ಟಾಕ್ ಪ್ಲಾಟ್‌ಫಾರ್ಮ್‌ಗೆ ಸೇರುವ ಮೂಲಕ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ನೀಡುತ್ತಿವೆ. ಇತ್ತೀಚೆಗೆ ಮೊಬೈಲ್ ಫೋನ್ ಬ್ರಾಂಡ್ itel ಟಿಕ್‌ಟಾಕ್‌ನಲ್ಲಿ ಅಭಿಯಾನ ಪ್ರಾರಂಭಿಸಿತ್ತು. ಇದು ಅದ್ಭುತ ಯಶಸ್ಸು ಕಂಡಿದೆ. ಈ ಅಭಿಯಾನದ ಭಾಗವಾಗಿ ಟಿಕ್ ಟಾಕ್ ಬಳಕೆದಾರರು ಅಗತ್ಯವಾದ ಟ್ಯಾಗ್ ಬಳಸಿ itel ನಲ್ಲಿರುವ ಹಾಡನ್ನು ಪ್ರದರ್ಶಿಸಬೇಕಾಗಿತ್ತು. ನಂತ್ರ ವೀಡಿಯೊ ಅಪ್‌ಲೋಡ್ ಮಾಡಬೇಕಾಗಿತ್ತು. ಇದಕ್ಕೆ ಪ್ರತಿಯಾಗಿ itel ಬಳಕೆದಾರರಿಗೆ ಹಣ ಪಾವತಿಸಿದೆ.
Itel ಜೊತೆ ಅಮಾಜ್‌ಫಿಟ್, ಮೂವ್ ಮತ್ತು ಬಿಂಗೊ ಬಳಕೆದಾರರಿಗೆ ವಿಭಿನ್ನ ಅಭಿಯಾನದ ಅಡಿಯಲ್ಲಿ ಹಣ ಗಳಿಸುವ ಅವಕಾಶವನ್ನು ನೀಡುತ್ತಿದೆ. ಎಲ್ಲ ಟಿಕ್ ಟಾಕ್ ಬಳಕೆದಾರರು ಹಣ ಗಳಿಸಲು ಸಾಧ್ಯವಿಲ್ಲ. ಟಿಕ್ ಟಾಕ್ ಬಳಕೆದಾರರ ಅನುಯಾಯಿಗಳ ಸಂಖ್ಯೆ ಹೆಚ್ಚಿರಬೇಕು. 1 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಟಿಕ್ ಟಾಕ್ ಬಳಕೆದಾರರನ್ನು ಕಂಪನಿ ಸಂಪರ್ಕಿಸಿ ಕಂಪನಿ ಪರ ವಿಡಿಯೋ ಅಪ್ಲೋಡ್ ಮಾಡಲು ಹೇಳುತ್ತದೆ. ಅದಕ್ಕೆ ಪ್ರತಿಯಾಗಿ ಹಣ ನೀಡುತ್ತದೆ.