Recent Posts

Monday, January 20, 2025
ಸಿನಿಮಾ

ಸೌಂದರ್ಯ’ದ ರಹಸ್ಯ ಬಿಚ್ಚಿಟ್ಟ ಕತ್ರಿನಾ – ಕಹಳೆ ನ್ಯೂಸ್

ಶೀಲಾ ಕಿ ಜವಾನಿಯ ಹುಡುಗಿ, ಬಾಲಿವುಡ್ ಹಾಟ್ ನಟಿ ಕತ್ರಿನಾ ಕೈಫ್ ವಿಭಿನ್ನ ಪಾತ್ರಗಳು ಮತ್ತು ನಟನಾ ಕೌಶಲ್ಯದಿಂದ ಪರದೆಯ ಮೇಲೆ ರಂಜಿಸಿದ್ದು ಸುಳ್ಳಲ್ಲ. ಇದರ ಹಿಂದಿನ ಆಕೆಯ ಗುಟ್ಟು ಅಥವಾ ಮಂತ್ರ ಎಂದರೆ ಫಿಟ್ ನೆಸ್.

36 ನೇ ವಯಸ್ಸಿನಲ್ಲೂ ಕತ್ರೀನಾ ಫಿಟ್ ಅಂಡ್‌ ಫೈನ್. ಇಷ್ಟರ ನಡುವೆ ಆಕೆಯ ಸೌಂದರ್ಯದ ರಹಸ್ಯವೇನು ಗೊತ್ತಾ? ಇದಕ್ಕೆ ಉತ್ತರ ಅಂದ್ರೆ ಆಕೆಯ ವರ್ಕೌಟ್ ಅಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫಿಟ್ನೆಸ್ ತರಬೇತುದಾರ ಯಾಸ್ಮಿನ್ ಕರಾಚಿವಾಲಾ ಬಳಿ ಕತ್ರಿನಾ ಕೈಫ್ ಕೂಡ ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲದೇ,‌ ಕರೀನಾ ಕಪೂರ್, ಆಲಿಯಾ ಭಟ್ ಸೇರಿದಂತೆ ಅನೇಕ ಪ್ರಸಿದ್ಧರಿಗೆ ಯಾಸ್ಮಿನ್ ತರಬೇತಿ ನೀಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಕತ್ರಿನಾ ಕೈಫ್ ತಮ್ಮ ವ್ಯಾಯಾಮದ ದಿನಚರಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಿವರ್ಸ್ ಲಂಜ್, ಜಂಪ್ ಸ್ಕ್ವಾಟ್, ವಾಕಿಂಗ್ ಲಂಜ್, ಬಾಕ್ಸಿಂಗ್ ಜಂಪ್ಸ್, ಸುಮೋ ಸ್ಕ್ವಾಟ್ಸ್, ಡೆಡ್ ಲಿಫ್ಟ್, ಬರ್ಪೀಸ್, ಸೇರಿದಂತೆ ಹಲವು ವ್ಯಾಯಾಮಗಳು ಅವರ ಪಟ್ಟಿಯಲ್ಲಿವೆ.
ಕತ್ರಿನಾ ಯಾವಾಗಲೂ ಫಿಟ್ನೆಸ್ ಉತ್ಸಾಹಿ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ,‌ ನಿಮಗಾಗಿ ಏನು ಕೆಲಸ ಮಾಡುತ್ತೀರಿ ಅನ್ನೋದು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮಗೆ ಒಂದೇ ದೇಹವಿದೆ ಎಂಬುದು ನೆನಪಿಡಿ ಅಂಥ ಹೇಳಿದ್ರು.

ಆಕೆ ಫಿಟ್ನೆಸ್ ದಿನಚರಿಯ ಬಗ್ಗೆ ಮಾತಾಡಿರುವ ಯಾಸ್ಮಿನ್, ಆಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಹುಡುಗಿ. ರಾತ್ರಿ 11 ಗಂಟೆಯಾದ್ರೂ ಸರಿ ಸೆಟ್ ನಿಂದ ನೇರವಾಗಿ ಜಿಮ್‌ಗೆ ಬಂದು ಮಧ್ಯರಾತ್ರಿಯವರೆಗೆ ಕಸರತ್ತು ಮಾಡ್ತಾರೆ. ಮರುದಿನ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಸೆಟ್‌ಗಳಿಗೆ ಹಿಂತಿರುಗಿ ಶೂಟ್ ನಲ್ಲಿ ನಟಿಸುತ್ತಾರೆ. ಅವರಿಗೆ ಉತ್ತಮ ಫಿಟ್ ನೆಸ್ ಇದೆ ಎಂದಿದ್ದಾರೆ.

ಸಲ್ಮಾನ್ ಖಾನ್ ಅವರೊಂದಿಗೆ ಕತ್ರಿನಾ ಕೊನೆಯ ಬಾರಿಗೆ ‘ಭಾರತ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟ ಅಕ್ಷಯ್ ಕುಮಾರ್ ಜೊತೆ ನಟಿಸಿರುವ ಸೂರ್ಯವಂಶಿ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ.