Sunday, January 19, 2025
ವಾಣಿಜ್ಯ

ಸತತವಾಗಿ ಏರುತ್ತಿದೆ ಪೆಟ್ರೋಲ್ ಬೆಲೆ : ಡೀಸೆಲ್ ಬೆಲೆ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು : ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದಾಗಿ ದೇಶದಲ್ಲಿಯೂ ತೈಲ ಬೆಲೆ ಹೆಚ್ಚಳವಾಗಿತ್ತು. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆ ಕಂಡು ಬಂದಿದ್ದು ಡೀಸೆಲ್ ಬೆಲೆ ಇಳಿಕೆ ಕಂಡು ಬಂದಿದೆ.

ಇಂದು ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ಲೀಟರ್‌ಗೆ 15 ಪೈಸೆ ಹೆಚ್ಚಳವಾಗಿ ರೂ. 76.89 ಆಗಿದೆ, ಅದೇ ರೀತಿ ಡೀಸೆಲ್‌ ದರ 68.06 ರೂ. ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 76.89 ರೂ. ಮತ್ತು ಡೀಸೆಲ್‌ ದರ 65.84 ರೂ. ಇದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 77.38 ರೂ. ಮತ್ತು ಡೀಸೆಲ್‌ ದರ 69.54 ರೂ. ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಲ್ಕತಾದಲ್ಲಿ ಪೆಟ್ರೋಲ್‌ ದರ 77.12 ರೂ. ಮತ್ತು ಡೀಸೆಲ್‌ ದರ 68.20 ರೂ. ಇದೆ. ಮುಂಬಯಿನಲ್ಲಿ ಪೆಟ್ರೋಲ್‌ ದರ 80.10 ರೂ. ಮತ್ತು ಡೀಸೆಲ್‌ ದರ 69.01 ರೂ. ಇದೆ.