ಬೆಳ್ತಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರೂ 2 ಕೋಟಿ ವೆಚ್ಚದಲ್ಲಿ ಬಂದಾರು ಗ್ರಾಮದ ಮೈರೋಲ್ತಡ್ಕ ಪುನರಡ್ಕ ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಣಿಯೂರು ಜಿ.ಪಂ ಸದಸ್ಯರಾದ ಕೆ.ಕೆ ಶಾಹುಲ್ ಹಮೀದ್, ಕಣಿಯೂರ್ ಗ್ರಾ.ಪಂ ಅಧ್ಯಕ್ಷ ಸುನೀಲ್ ಕುಮಾರ್, ಬಂದಾರು ಗ್ರಾ.ಪಂ ಅಧ್ಯಕ್ಷ ಉದಯ ಕುಮಾರ್, ಇಳಂತಿಲ ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ತಾಲೂಕ್ ಜನಜಾಗೃತಿ ಅಧ್ಯಕ್ಷೆ ಶಾರಾದಾ ಆರ್ ರೈ, ತಾ.ಪಂ ಮಾಜಿ ಸದಸ್ಯೆ ಮಹಾಬಲ ಗೌಡ, ಹಾಗೂ ಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.