ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರ ಸ್ಮಿತೇಶ್ ಎಸ್ ಬಾರ್ಯ, ನಿರ್ದೇಶನದ ಈ ಚಿತ್ರಕ್ಕೆ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ನವೀನ್ ಪೂಜಾರಿ ಚಿತ್ರದ ಕಥೆ ಹೆಣೆದಿದ್ದಾರೆ. ಸಂತೋμï ಆಚಾರ್ಯ ಗುಂಪಲಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಮಾನಸಹೊಳ್ಳ ಸಂಗೀತದ ಇಂಪು ನೀಡುತ್ತಿದ್ದಾರೆ. ಸಂಕಲನಕಾರರಾಗಿ ಗಣೇಶ್ ನಿರ್ಚಾಲ್ ಜೊತೆಯಾಗಿದ್ದಾರೆ. ಸಿನೆಮಾಗಳ ಗೀತೆಗೆ ಸಾಹಿತ್ಯ ಬರೆದ ಕವಿರಾಜ್, ಭರಾಟೆ ನಿರ್ದೇಶಕ ಚೇತನ್, ಸಾಹಿತಿ ನಾಗೇಂದ್ರಪ್ರಸಾದ್, ಸುಕೇಶ್ ಇವರುಗಳು ಕನಸಿನ ಹಾಡಿಗೆ ಸಾಹಿತ್ಯದ ಸಾಥ್ ನೀಡಿದ್ದಾರೆ. ನಾಯಕನಾಗಿ ಪ್ರಜ್ಞೇಶ್, ನಾಯಕಿ ಸ್ವಸ್ತಿಕ, ಹಾಗೂ ನವ್ಯ, ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಧೀರಜ್ ನೀರ್ಮಾರ್ಗ, ಚಿದಂಬರ, ಸೂರ್ಯ ಕುಂದಾಪುರ ಹಾಗೂ ಚೇತನ್ ರೈ ಮಾಣಿ, ಮೋಹನ್ ಶೇಣಿ, ಹೀಗೆ ಹಲವಾರು ಕಲಾವಿದರ ದಂಡೇ ಇದೆ.
ಅದ್ರಲ್ಲೂ ಮುಖ್ಯವಾಗಿ ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ವಾಸಣ್ಣ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿದ್ದು. ಈ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಸಿನೆಮಾ ಅತಿ ಶೀಘ್ರದಲ್ಲಿ ತೆರೆ ಕಾಣಲಿದ್ದು. ಎಲ್ಲ ಪ್ರೇಕ್ಷಕರು ಥಿಯೇಟರ್‍ಗೆ ಹೋಗಿ ಸಿನೆಮಾ ನೋಡಿ ಹರಸಿ ಆಶೀರ್ವದಿಸಿ ಎಂದು ವಿನಂತಿಸುತ್ತಿದ್ದೇವೆ.