ಪಕ್ಷಪಾತದಿಂದ ಬಳಲುತ್ತಿರುವ ಮುರಳಿ ಅವರಿಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಬಲ್ನಾಡು ಹಾಗು ಕುಲಾಲ್ ಸಂಘದ ವತಿಯಿಂದ ಸಹಾಯ ಹಸ್ತ – ಕಹಳೆ ನ್ಯೂಸ್
ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಬಲ್ನಾಡು ಹಾಗು ಕುಲಾಲ್ ಸಂಘದ ವತಿಯಿಂದ, ಪಕ್ಷಪಾತದಿಂದ ಬಳಲುತ್ತಿರುವ, ಬಲ್ನಾಡು ಪದವು ನಿವಾಸಿ ಮುರಳಿ ಅವರ ಮುಂದಿನ ಜೀವನ ನಿರ್ವಹಣೆಗೆ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.
39 ವರ್ಷದಿಂದ ಮುರಳಿಯವರು ಬಲ್ನಾಡು ಪದವು ಎಂಬಲ್ಲಿ ತಾಯಿಯೊಂದಿಗೆ ವಾಸವಾಗಿದ್ದು, ಬಲ್ನಾಡಿನಲ್ಲಿ 20 ವರ್ಷ ಇಲೆಕ್ಟ್ರೀಶಿಯನ್ ಆಗಿ ಕೆಲಸಮಾಡುತ್ತಿದ್ದ ಇವರು ಮನೆಯ ಬೆನ್ನೆಲುಬಾಗಿದ್ದರು.
ಇನ್ನು ಕಳೆದ ಎರಡು ವರ್ಷದ ಹಿಂದೆ ಪಕ್ಷಪಾತವಾಗಿ ದೇಹದ ಒಂದು ಬದಿ ತನ್ನ ಸ್ವಾದೀನವನ್ನ ಕಳೆದುಕೊಂಡಿದ್ದು ಕಂಗಾಲಾಗಿ ಹೋಗಿದ್ದಾರೆ. ಇನ್ನು ಇವರ ತಾಯಿ 3 ತಿಂಗಳ ಹಿಂದೆ ಬಸ್‍ನಲ್ಲಿ ಸಂಚರಿಸುವಾಗ ಆಪಘಾತಕ್ಕೀಡಾಗಿ ಕೆಲಸ ಮಾಡಲಾಗದ ಸ್ಧಿತಿಯಲ್ಲಿದ್ದು, ವೈದ್ಯರು 2 ತಿಂಗಳು ರೆಸ್ಟ್ ತೆಗದುಕೊಳ್ಳುವಂತೆ ತಿಳಿಸಿದ್ದಾರೆ. ಇದರಿಂದಾಗಿ ಇವರ ಮನೆಗೆ ಯಾವುದೇ ಆಧಾರವಿಲ್ಲದೆ ಬೇಸತ್ತು ಹೋಗಿದ್ದಾರೆ.
ಮನೆಯ ಏಕೈಕ ಆಸರೆ ಆಗಿದ್ದ ಮುರಳಿ ಅನಾರೋಗ್ಯಕ್ಕೀಡಾಗಿ ಸಂಕಟದ ದಿನಗಳನ್ನು ಎದುರಿಸುತ್ತಿದ್ದಾರೆ. ಇವರ ಕಷ್ಟವನ್ನು ಮನಗಂಡ ವಿನಾಯಕ ಫ್ರಂಡ್ಸ್ ಚಾರಿಟೇಬಲ್ ಟ್ರಸ್ಟಿನ ಸದಸ್ಯರು ದಿನಸಿ ಸಾಮಾಗ್ರಿಗಳನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ..
ಈ ಸಂದರ್ಭ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಗುರುರಾಜ್ ಬಲ್ನಾಡು, ವಿಶ್ವ ಹಿಂದು ಪರಿಷತ್ ಹಿಂದವಿ ಶಾಖೆ ಬಲ್ನಾಡು ಅಧ್ಯಕ್ಷ ಗಿರೀಶ್ ಪದವು, ಶರತ್ ಮುದಲಾಜೆ, ಸುರೇಶ್, ನಿತಿನ್ ಮತ್ತಿತರರು ಉಪಸ್ಥಿತರಿದ್ದ.