Sunday, November 24, 2024
ಯಕ್ಷಗಾನ / ಕಲೆಸುದ್ದಿ

ಪಟ್ಲ ಸತೀಶ್ ಶೆಟ್ಟಿಯವರಿಗಾದ ಅಪಮಾನ ಯಕ್ಷಗಾನ ಕಲೆಗೆ ಆದ ಅಪಮಾನ – ಖಂಡನಾ ಸಭೆಯಲ್ಲಿ ಹಿರಿಯ ಯಕ್ಷಗಾನ ವಿಮರ್ಶಕ, ವಿದ್ವಾಂಸ ಡಾ. ಪ್ರಭಾಕರ್ ಜೋಶಿ ಖಂಡನೆ – ಕಹಳೆ ನ್ಯೂಸ್

ಮಂಗಳೂರು : ಯಕ್ಷರಂಗದ ಧ್ರುವತಾರೆ ಪಟ್ಲ ಸತೀಶ್ ಶೆಟ್ಟಿಯವರಿಗೆ ಅಪಮಾನ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಡೆದ ಪಟ್ಲಾಭಿಮಾನಿಗಳ ಮತ್ತು ಕಟೀಲು ಭಕ್ತರ ಸಭೆಯಲ್ಲಿ ಮಾತನಾಡಿದ ಪ್ರಭಾಕರ ಜೋಶಿಯವರು ನಿನ್ನೆ ಕಟೀಲಿನಲ್ಲಿ ನಡೆದ ಘಟನೆಯನ್ನು ತೀರ್ವವಾಗಿ ಖಂಡಿಸುತ್ತೇನೆ ಮತ್ತು ಇಂತಹಾ ಅಪಮಾನ ಯಾವ ಕಲಾವಿದರಿಗೂ ಆಗಬಾರದು, ಕಟೀಲು ಕ್ಷೇತ್ರದಲ್ಲಿ ಇಂತಹ ಘಟನೆ ನಡೆದದ್ದು ತೀವ್ರ ಬೇಸರವಾಗಿದೆ.

ಭಾಗವತರು ಯಕ್ಷರಂಗದ ಯಜಮಾನರೇ ಅವರನ್ನು ಅಪಮಾನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ ಯಕ್ಷಗಾನ ಕಲಾವಿದರು ಕಟೀಲು ತಾಯಿಯನ್ನು ಪೂಜಿಸುವ ಅರ್ಚಕರು, ಅವರ ಪೂಜೆಯೇ ಯಕ್ಷ ಆರಾಧನೆ, ಪಟ್ಲರಿಗಾದ ಅಪಮಾನ ಅತ್ಯಂತ ಬೇಸರ ತಂದಿದೆ ಎಂದಿದ್ದಾರೆ.

ಪಟ್ಲರನ್ನು ಅಪಮಾನಿಸಿದ್ದು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ – ನವನೀತ್ ಶೆಟ್ಟಿ ಕದ್ರಿ

ಯಕ್ಷಗಾನ ಅಕಾಡೆಮಿ ಸದಸ್ಯ ನವನೀತ್ ಶೆಟ್ಟಿ ಕದ್ರಿ ಮಾತನಾಡಿ ಪಟ್ಲರನ್ನು ಅಪಮಾನಿಸಿದ್ದು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ಇವರ ಬಗ್ಗೆ ಡಿ.ಸಿ.ಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಪಟ್ಲರಂತಹ ಕಲಾವಿದರಿಗೆ ಹೀಗಾದರೆ ಸಾಮಾನ್ಯ ಕಲಾವಿದರ ಪರಿಸ್ಥಿತಿ ಏನು ?? ಪಟ್ಲರ ಅಪಮಾನ ಯಕ್ಷಗಾನಕ್ಕಾದ ಅಪಮಾನ ಎಂದು ಹೇಳಿದ್ದಾರೆ.

ಸಭೆಯಲ್ಲಿ ಆರ್.ಕೆ. ಬೆಳ್ಳಾರೆ, ಸಂಜಯಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.