Monday, January 20, 2025
ಸುದ್ದಿ

ಪುತ್ತೂರು: ‘ಡಬ್ಬಲ್ ಮರ್ಡರ್’ ಆರೋಪಿಗೆ ನ್ಯಾಯಾಂಗ ಬಂಧನ- ಇನ್ನೊಂದು ಸರ ವಶ-ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ಕುರಿಯದ ಹೊಸಮಾರು ಎಂಬಲ್ಲಿ ನವೆಂಬರ್ 17ರಂದು ಮಾರಾಕಾಸ್ತ್ರದಿಂದ ಮೂವರ ಮೇಲೆ ಹಲ್ಲೆ ನಡೆಸಿ, ಇಬ್ಬರು ಬರ್ಬರವಾಗಿ ಕೊಲೆಗೈದ ಆರೋಪಿ ಕರೀಂ ಖಾನ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ನವೆಂಬರ್ 22ರ ಶುಕ್ರವಾರ ತನಿಖೆ ನಡೆಸಿದ ವೇಳೆ ಆರೋಪಿಯು ಖತೀಜಮ್ಮನವರ ಕುತ್ತಿಗೆಯಲ್ಲಿದ್ದ ಇನ್ನೊಂದು ಸರವನ್ನು ಕೂಡಾ ಎದಗರಿಸಿದ್ದು, ಸುಮಾರು 1 ಪವನ್ ತೂಕದ ಸರವನ್ನು ಪುತ್ತೂರಿನ ಬ್ಯಾಂಕ್ ಒಂದರಲ್ಲಿ ಅಡವಿರಿಸಿದ್ದು ತಿಳಿದುಬಂದಿದೆ. ಆ ಸರವನ್ನು ಬ್ಯಾಂಕ್ ನಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಪೊಲೀಸರು ಆರೋಪಿಯು ಬ್ಯಾಂಕಿಗೆ ಆಗಮಿಸಿದ್ದ ಸಿಸಿಟಿವಿ ಫೂಟೇಜನ್ನೂ ಪಡೆದಿದ್ದಾರೆ.

ಆರೋಪಿಯನ್ನು ನವೆಂಬರ್ 22ರ ಶುಕ್ರವಾರದಂದು ನ್ಯಾಯಾಲಯವು ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಬಳಿಕ ಆತನನ್ನು ವಿಚಾರಣೆ ಮಾಡಿ ಹತ್ಯೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಲಾಯಿತು. ಆ ಬಳಿಕ ರಾತ್ರಿಯೇ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆತನು ಹತ್ಯೆ ಮಾಡುವ ವೇಳೆ ಕೈಗೆ ಗಾಐವಾಗಿದ್ದ ಕಾರಣ ಆತನಿಗೆ ಸರಕಾರಿ ಆಸ್ಪತ್ರೆಯಿಂದ ಒಂದು ವಾರದ ಔಷಧಿಯನ್ನು ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು