Recent Posts

Monday, January 20, 2025
ಸುದ್ದಿ

ಈ ಜೋಡಿ ಹೀಗೆಲ್ಲ ಮೈ, ಮುಖಕ್ಕೆ ಕೆಸರು ಬಳಿದುಕೊಂಡು ಏನು ಮಾಡುತ್ತಿದ್ದಾರೆ? ಮತ್ತೇನಲ್ಲ ಕಣ್ರೀ ಅದು ಮದುವೆ ಸಂಭ್ರಮ.-ಕಹಳೆ ನ್ಯೂಸ್

ನವದೆಹಲಿ: ಈಗಂತೂ ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಸಿಕ್ಕಾಪಟೆ ಟ್ರೆಂಡ್​ ಆಗಿದೆ. ಅದೆಷ್ಟೋ ಜೋಡಿಗಳು ಭಿನ್ನ-ವಿಭಿನ್ನವಾಗಿ ತಮ್ಮ ಮದುವೆ ಫೋಟೋ ಶೂಟ್​ ಮಾಡಿಸುತ್ತಾರೆ.

ಹೀಗೆ ಈಗೊಂದು ಜೋಡಿ ಕೂಡ ತುಂಬ ಚೆಂದವಾಗಿ ತಮ್ಮ ವೆಡ್ಡಿಂಗ್​ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಈ ಜೋಡಿ ಕೆಸರು ಗದ್ದೆಯಲ್ಲಿ ತಮ್ಮ ಫೋಟೋ ಶೂಟ್​ ಮಾಡಸಿಕೊಂಡಿದ್ದಾರೆ. ಮೈಗೆ, ಮುಖಕ್ಕೆ ಎಲ್ಲ ಕೆಸರು ಮೆತ್ತಿಕೊಂಡು ಫೋಟೊಕ್ಕೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಕೆಸರಲ್ಲಿ ತೆಗೆದರೂ ತುಂಬ ಸುಂದರವಾಗಿ ಮೂಡಿ ಬಂದಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿನು ಸೀನ್ಸ್​ ಫೋಟೊಗ್ರಫಿ ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಫೋಟೋಗಳು ಪೋಸ್ಟ್​ ಆಗಿದ್ದು ಈಗಾಗಲೇ 2000ಕ್ಕೂ ಅಧಿಕ ರೀಟ್ವೀಟ್​ ಆಗಿವೆ. ಆದರೆ ಈ ಜೋಡಿ ಯಾರು, ಇದು ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೋಸ್ಟ್​ಗಳಿಗೆ ಸಿಕ್ಕಾಪಟೆ ಕಾಮೆಂಟ್​ಗಳು ಬರುತ್ತಿವೆ. ಕೆಲವು ನೆಟ್ಟಿಗರಂತೂ ಜೋಕ್​ ಮಾಡುತ್ತಿದ್ದಾರೆ. ಸಿಕ್ಕಾಪಟೆ ಡೌನ್​ ಟು ಅರ್ಥ್​ ಜೋಡಿ ಎಂದೆಲ್ಲ ಕಾಲೆಳೆಯುತ್ತಿದ್ದಾರೆ.