Recent Posts

Monday, January 20, 2025
ಕ್ರೀಡೆ

ಒಂದು ಪಂದ್ಯ ಹಲವು ದಾಖಲೆ: ಪಿಂಕ್ ಟೆಸ್ಟ್ ನ ರೋಚಕತೆಗೆ ಇದೇ ಸಾಕ್ಷಿ-ಕಹಳೆ ನ್ಯೂಸ್

ಕೋಲ್ಕತ್ತಾ: ಐತಿಹಾಸಿಕ ಹಗಲು- ರಾತ್ರಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಬಳಗ ಭರ್ಜರಿ ಗೆಲುವು ಸಾಧಿಸಿದೆ. ಆಡಿದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವುದರೊಂದಿಗೆ ಭಾರತ ಹೊಸ ಅಧ್ಯಾಯಕ್ಕೆ ಶುಭಾರಂಭ ಮಾಡಿದೆ.

ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ ಈ ಸಾಧನೆ ಮಾಡಿದ ಮೊದಲ ತಂಡವಾಗಿ ವಿಶ್ವದಾಖಲೆ ಬರೆಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆ ಮತ್ತು ರಾಂಚಿ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ ಬಾಂಗ್ಲಾ ವಿರುದ್ಧ ಎರಡೂ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದಲೇ ಜಯ ಸಾಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ನಾಯಕ ಎಂಬ ದಾಖಲೆ ಪಟ್ಟಿಯಲ್ಲಿ ವಿರಾಟ್ ಅಲನ್ ಬಾರ್ಡರ್ ಅವರನ್ನು ಹಿಂದಿಕ್ಕಿದರು. ಬಾರ್ಡರ್ 32 ಪಂದ್ಯ ಗೆದ್ದಿದ್ದರೆ, ವಿರಾಟ್ 33 ಗೆದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸತತ ಏಳು ಟೆಸ್ಟ್ ಪಂದ್ಯ ಗೆದ್ದ ಭಾರತೀಯ ನಾಯಕ ಎಂಬ ದಾಖಲೆಯಲ್ಲಿ ವಿರಾಟ್ ತಮ್ಮ ಹೆಸರನ್ನು ಅಚ್ಚೊತ್ತಿದರು. ಈ ಹಿಂದೆ ಧೋನಿ ಸತತ ಆರು ಟೆಸ್ಟ್ ಪಂದ್ಯ ಗೆದ್ದಿದ್ದರು.