ಮಂಗಳೂರು: ಕಳೆದ 5 ದಿನಗಳಿಂದ ಕರಾವಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ.
4-5 ದಿನಗಳ ಹಿಂದೆ ಕೆಜಿ ಈರುಳ್ಳಿಗೆ 80 ರೂಪಾಯಿ ಇದ್ದ ದರ 90 ರಿಂದ 96 ರೂಪಾಯಿಗೆ ಏರಿಕೆಯಾಗಿದೆ. ಹೊಸ ಈರುಳ್ಳಿಗೆ 60 ರಿಂದ 80 ರೂಪಾಯಿಗಳಾಗಿದ್ದು, ಸಣ್ಣ ಈರುಳ್ಳಿ ಬೆಲೆ 40 ರಿಂದ 50 ರೂಪಾಯಿ ದರ ಇದೆ.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಉಡುಪಿಯಲ್ಲಿ ದೊಡ್ಡ ಗಾತ್ರದ ಈರುಳ್ಳಿ ದರ 96 ರಿಂದ 100 ರೂಪಾಯಿ, ಮಧ್ಯಮ ಗಾತ್ರದ ಈರುಳ್ಳಿ ದರ 90 ರೂಪಾಯಿ ಇದೆ. ಈರುಳ್ಳಿ ಪೂರೈಕೆಯಲ್ಲಿ ಕಡಿಮೆಯಾಗಿರುವುದೇ ಕರಾವಳಿಯ ಮಾರುಕಟ್ಟೆಗಳಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಏರಿಕೆಯಾಗುತ್ತಿರುವ ಈರುಳ್ಳಿ ದರದಿಂದ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ.