ಸ್ವದೇಶೀ ಕಂಪೆನಿಯಾದ ಬಾಬಾ ರಾಮ್ ದೇವ್ ಮಾಲಿಕತ್ವದ ಪತಾಂಜಲಿ ಕಂಪೆನಿ ವೀದೆಶಿ ಕಂಪೆನಿಗಳ ನಿದ್ದೆ ಗೆಡಿಸಲು ಮತ್ತೊಮ್ಮೆ ತಯಾರಾಗಿದೆ. ಸ್ವದೇಶೀ ಉತ್ಪನ್ನದ ಮೂಲಕ ದೇಶದ ಮನೆ ಮಾತಾಗಿರುವ ಪತಾಂಜಲಿ ಇತ್ತಿಚೆಗೆ ಭಾರತೀಯ ಸೈನ್ಯಕ್ಕೆ ತನ್ನ ಸಹಾಯಹಸ್ತ ಚಾಚಿತ್ತು .
ಈಗ ವಿಮೆ ಮೂಲಕ ಅಪಘಾತದಲ್ಲಿ ಮೃತಪಟ್ಟರೆ ಮತ್ತು ಅಂಗವಿಕಲರಾದರೆ ವಿಮೆ ಸೌಲಭ್ಯ ನೀಡಲಾಗುವುದು ಎಂದು ಬಳ್ಳಾರಿಯಲ್ಲಿ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿದ್ದ ಬಾಬಾ ರಾಮದೇವ್ ಪತಾಂಜಲಿ ಗ್ರಾಹಕರಿಗೆ ಲೋಯಾಲ್ಟಿ ಕಾರ್ಡ್ ನೀಡಿ ಅವರಿಗೆ ವಿಮೆ ಸೌಲಭ್ಯ ಪಡೆದುಕೊಳ್ಳುಬಹುದಾಗಿದೆ ಎಂದಿದ್ದಾರೆ.
ಲೋಯಾಲ್ಟಿ ಕಾರ್ಡ್ 500 ರ ಪತಾಂಜಲಿ ಉತ್ಪನ್ನಗಳ ಖರೀದಿ ಮೇಲೆ ಎಲ್ಲಾ ಪತಾಂಜಲಿ ಸ್ಟೋರ್ ಗಳಲ್ಲಿ ಸಿಗಲಿದೆ ಈ ಯೋಜನೆ ಅದಷ್ಟು ಶೀಘ್ರವೇ ಜಾರಿಗೆ ಬರಲಿದೆ ಎಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.
ಈ ಯೋಜನೆ ಮೂಲಕ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 5. ಲಕ್ಷ ಅಂಗವೈಕಲ್ಯ ರಾದವರಿಗೆ 2.5 ಲಕ್ಷ ವಿಮಾ ಮೂಲಕ ನೀಡಲಾಗುವುದು ಎಂದು ಬಳ್ಳಾರಿಯ ಪತಾಂಜಲಿ ಸ್ಟೋರ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ . ಲೋಯಾಲ್ಟಿ ಕಾರ್ಡ್ ನಿಮಗೆ ದೇಶದಲ್ಲಿರುವ ಎಲ್ಲಾ ಪತಾಂಜಲಿ ಸ್ಟೋರ್ ಗಳಲ್ಲಿ ದೊರಕಲಿದೆ ಎಂದು ಹೇಳಿದ್ದಾರೆ.
ವರದಿ : ಕಹಳೆ ನ್ಯೂಸ್