Tuesday, November 26, 2024
ಸುದ್ದಿ

ಇಚಿಲಂಪಾಡಿ ಬೀಡಿನ ಅಚ್ಚಿತ್ತಿಮಾರ್ ಕಂಬಳ ಗದ್ದೆಯಲ್ಲಿ ಸಾಂಪ್ರದಾಯಿಕ ಉಳ್ಳಾಕ್ಲು ದೈವಗಳ ಸಂಬಂಧಪಟ್ಟ ಕಂಬಳ ಉತ್ಸವವು ಬಹಳ ವಿಜೃಂಭಣೆಯಿಂದ ದಿನಾಂಕ 24 ನವೆಂಬರ್ ರಂದು ನಡೆಯಿತು – ಕಹಳೆ ನ್ಯೂಸ್

ಇಚಿಲಂಪಾಡಿ ಬೀಡಿನ ಅಚ್ಚಿತ್ತಿಮಾರ್ ಕಂಬಳ ಗದ್ದೆಯಲ್ಲಿ ಸಾಂಪ್ರದಾಯಿಕ ಉಳ್ಳಾಕ್ಲು ದೈವಗಳ ಸಂಬಂಧಪಟ್ಟ ಕಂಬಳ ಉತ್ಸವವು ಬಹಳ ವಿಜೃಂಭಣೆಯಿಂದ ದಿನಾಂಕ 24 ನವೆಂಬರ್ ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಿನಾಂಕ 23 ರ ರಾತ್ರಿ ಪೆರ್ಗಡೆ ಶುಭಕರ ಜೈನ್, ದೈವದ ಪರಿಚಾರಕ ಶಿವರಾಮ ದೇವಾಡಿಗ, ಬೋಂಟ್ರ ಬೀಜೇರು ಶೇಖರ ಪೂಜಾರಿ ಹಾಗು ಊರ ಹತ್ತು ಸಮಸ್ತರ ಸಮ್ಮುಖದಲ್ಲಿ ಹೊಸಗೆಯ ಕ್ರಮದಿಂದ ಮೊದಲ್ಗೊಂಡ ಕಂಬಳ ಉತ್ಸವವು ಮಾರನೇ ದಿನ ಸಂಜೆ ಪೂಕರೆ ಹಾಕುವುದರ ಜೊತೆಯಲ್ಲಿ ಸಮಾಪ್ತಿಗೊಂಡಿತು. ಸುಮಾರು 500 ವರ್ಷಗಳ ಐತಿಹ್ಯ ಇರುವ ಕಂಬಳ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತಾದರೂ ಬಳಿಕ ಊರವರ ಪರಿಶ್ರಮದಿಂದ ಪುನರಾರಂಭಗೊಂಡು ಇದೀಗ 4 ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಲದ ಕಂಬಳ ಉತ್ಸವದಲ್ಲಿ ಬೀಜೇರು ಶೇಖರ ಪೂಜಾರಿ ಮತ್ತು ಬರೆಮೇಲು ನವೀನ ಪೂಜಾರಿಯವರ ಕಂಬಳದ ಕೋಣಗಳು ಗಮನ ಸೆಳೆದವು. ನಿಡ್ಯಡ್ಕ ಶ್ರೀನಿವಾಸ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿದರು.