ಭಾರತೀಯ ಜೈನ್ ಮಿಲನ್ ಮಂಗಳೂರು :ಮಾಸಿಕ ಸಭೆ , ಮಕ್ಕಿಮನೆ ಕಲಾವೃಂದ ದಿಂದ ಸಾಂಸ್ಕೃತಿಕ ಕಾರ್ಯಕ್ರಮ – ಕಹಳೆ ನ್ಯೂಸ್
ಮಂಗಳೂರು :– ಭಾರತೀಯ ಜೈನ್ ಮಿಲನ್ ಮಂಗಳೂರು ಇದರ ನವಂಬರ್ ತಿಂಗಳ ಮಾಸಿಕ ಸಭೆ ಭಾನುವಾರ ಮಂಗಳೂರಿನ ಶ್ರೀನಿವಾಸ್ ಹೊಟೇಲ್ ಸಭಾ ಭವನದಲ್ಲಿ ಜರಗಿತು.
ಮಂಗಳೂರು ಜೈನ್ ಮಿಲನ್ ನ ಅಧ್ಯಕ್ಷರಾದ ವೀರ್ ಯನ್. ಜಗತ್ಪಾಲ್ ಜೈನ್ ಸ್ವಾಗತಿಸಿದರು.
ವಲಯ -8 ರ ಮಂಗಳೂರು ವಿಭಾಗದ ನಿರ್ದೇಶಕರಾದ ವೀರ್ ಜಯರಾಜ್ ಕಂಬಳಿ ಹಾಗೂ ಸುಭಾಷ್ ಚಂದ್ರ ಸೂರ್ಯಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ವಲಯ -8 ರ ಕೋಶಾಧಿಕಾರಿ ಪ್ರಮೋದ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದರು.
ವೀರಾಂಗನ ಪದ್ಮಲತಾ ಬಾಹುಬಲಿ ಪ್ರಾರ್ಥನೆಗೈದರು ವೀರಾಂಗನ ಡಾ. ಶರಣ್ಯ ಅರಿಂಜಯ್ ನವಂಬರ್ ತಿಂಗಳಲ್ಲಿ ವೀರ್ ಹಾಗೂ ವೀರಾಂಗನೆಯರು ಆಚರಿಸಿದ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿದವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೋರೆ ಗೊಳಿಸಿತು.
ಶ್ರೇಯಾ ದಾಸ್, ಶಿಖಾ ಸಾಲ್ಯಾನ್, ಪಿ. ದೀಪ್ತಿ ಜೈನ್, ಸ್ವಸ್ತಿಶ್ರೀ ಕದ್ರಿ, ತನುಸ್ವಿ ಮಂಗಳೂರು, ಮನುಸ್ವಿ ಮಂಗಳೂರು, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೇಯಾ ಜೈನ್ ನಿರೂಪಿಸಿದರು
ನಿಶಾಲ್ ವಾಮಂಜೂರ್ ಹಾಗೂ ಸಂತೋಷ ಕುಳಾಯಿ ಸಹಕರಿಸಿದರು.
ಮಂಗಳೂರು ಜೈನ್ ಮಿಲನ್ ಕಾರ್ಯದರ್ಶಿ ಬಿ. ಸಿದ್ದಾರ್ಥ ಅಜ್ರಿ ವಂದನಾರ್ಪಣೆಗೈದರು.
ಇದೇ ಸಮಾರಂಭದಲ್ಲಿ ಮೂಡುಬಿದಿರೆಯ ಕು. ಮೋಕ್ಷ ಜೈನ್ ರವರ ವೈದ್ಯಕೀಯ ಚಿಕಿತ್ಸೆ ಗೆ ಸಹಾಯ ಮಾಡುವ ಉದ್ದೇಶದಿಂದ ಮಂಗಳೂರು ಜೈನ್ ಮಿಲನ್ ವತಿಯಿಂದ ಸಂಗ್ರಹಿಸಿದ 68,000 ಸಾವಿರ ರೂಪಾಯಿ ಅನ್ನು ಅವಳ ಹೆತ್ತವರಿಗೆ ಹಸ್ತಾಂತರಿಸಲಾಯಿತು.
ವೀರ್ ಸನತ್ ಕುಮಾರ್ ಜೈನ್, ವೀರ್ ಅರಿಂಜಯ ,ಜೈನ್ ಮಿಲನ್ ಕೋಶಾಧಿಕಾರಿ ಹೆಚ್. ಎಲ್ ಬಾಹುಬಲಿ ಕಾರ್ಯಕ್ರಮ ಕ್ಕೆ ಸಹಕರಿಸಿದರು.
ಪಿ. ಕೆ ಯಶೋಧರ್ ರವರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.