ಸೆವೆನ್ ಏ ಫುಟ್ ಬಾಲ್ ಗೋಳಿಕಟ್ಟೆ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟಸಿದ ಶಾಸಕಿ | ಕ್ರೀಡೆ ಜನರಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುತ್ತದೆ – ಇಬ್ರಾಹಿಂ ಗೋಳಿಕಟ್ಟಿ
ಪುತ್ತೂರು : ಸೆವೆನ್ ಏ ಫುಟ್ ಬಾಲ್ ಗೋಳಿಕಟ್ಟೆ ಕ್ರೀಡಾಂಗಣದಲ್ಲಿ 3ನೇ ತಾರೀಕು ನಡೆದಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಲು ಮುಖ್ಯ ಅತಿಥಿಯಗಿ ಆಗಮಿಸಿದ ಪುತ್ತೂರಿನ ಶಾಸಕರು ಶ್ರೀಮತಿ ಶಕುಂತಲಾ ಶೆಟ್ಟಿ ಮತ್ತು ಇಬ್ರಾಹಿಂ ಗೋಳಿಕಟ್ಟೆ ರಾಜ್ಯ ಜಂಟಿ ಕಾರ್ಯದರ್ಶಿ ಜೆಡಿಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೋಳಿಕಟ್ಟೆ ಮಾತನಾಡಿ ಗೌತಮ ಬುದ್ದ ..ಒಂದು ಮಾತನ್ನು ಹೇಳುತ್ತಾರೆ. ದುರಾಸೆಯೇ ದುಃಖಕ್ಕೆ ಮೂಲ ಎಂದು . ಅದು ಸತ್ಯ .ದುರಾಸೆ ಮನುಷ್ಯ ಸದಾ ಕಾಲ ನಿರಾಸೆಯಿಂದ ನರಳಬೇಕಾಗುತ್ತದು.
ಮನುಷ್ಯನಿಗೆ ಆಸೆ ಇದ್ದರೆ ಅದು ಸಕಾರಾತ್ಮಕ ಎಂದು ಹೇಳಬಹುದು. ಆದರೆ ದುರಾಸೆ ಇರುವ ಮನುಷ್ಯನಿಗೆ ಆಸೆಗಳು ಹಲವಾರು ಹೀಗಾಗಿ ಅವನು ಬದುಕಿನಲ್ಲಿ ಸಂತೋಷವಾಗಿ ಇರಲಾರನು. ದುರಾಸೆಯಿಂದ ದುಃಖ, ಆಸಂತೋಷ ಕಾಣ ಬೇಕಾಗುವುದು. ಆಸೆಗಳು ಮಿತಿಯಲ್ಲಿ ಇದ್ದರೆ ಮಾತ್ರ ಸುಖ, ಸಂತೋಷ. ದುರಾಸೆಯ ಮನುಷ್ಯ ಎಂದಿಗೂ ಯಾರಿಗೂ ಉಪಯುಕ್ತನಾಗಿ ಬಾಳ ಲಾರನು. ಆದುದರಿಂದ ದುರಾಸೆಯನ್ನು ಬಿಟ್ಟು ನೆಮ್ಮದಿಯ ಬದುಕಿ ಬಾಳಿ ಯುವಕರು ಕೋಪದಿಂದ ದೂರ ಸರಿಯಬೇಕು. ಕೋಪ ಬಂದಾಗ ಮನುಷ್ಯನು ಸಂಯಮ ಕಳೆದುಕೊಂಡು ಬೇರೆಯವರನ್ನು ಅವಾಚೃ ಪದಗಳಿಂದ ನಿಂದಿಸುವುದರಿಂದ ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಉತ್ತಮ ಸಂಬಂಧ ಹಾಳಾಗಿ ಅಲ್ಲಿ ಒಂದು ರೀತಿಯ ಅಗೋಚರ ಗೋಡೆ ಏಳುವುದು. ಕೋಪ ಇಳಿದ ನಂತರ ಮಾಡಿದ ಕಾರ್ಯಕ್ಕೆ ಪಶ್ಚತಾಪ ಪಟ್ಟರೂ ಅದು ಮೊದಲಿನ ಸಂಬಂಧವನ್ನು ಉಳಿಸಲಾರರು.ಮನದಲ್ಲಿ ಮಾಯದ ಗಾಯವಾಗಿ ಉಳಿದುಬಿಡುವುದು .ಅಂದಿನ ಕಹಿಯನ್ನು ಎದುರಿನ ವ್ಯಕ್ತಿ ಎಂದಿಗೂ ಮರೆಯಲಾರೆ. ತಾಳಿದವನು ಬಾಳಿಯನು. ಎಂಬಂತೆ .ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಹಮ್ಮದ್ ಬಡಗನ್ನೂರು, ಕಾಂಗ್ರೆಸ್ ಬ್ಲಾಕ್ ಅಧ್ಯರು. ರೋಶನ್ ಶೆಟ್ಟಿ ಉದ್ಯಮಿ. ಸಕೀರ್ ಉದ್ಯಮಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕ ಅಪ್ತಾಝ್ ಅತಿಥಿಗಳನ್ನು ಸ್ವಾಗತಿಸಿದರು.