ಪುತ್ತೂರು : ನಾಡಿನ ಸುಪ್ರಸಿದ್ಧ ಗಾಯಕರು ಮತ್ತು ಕಳೆದ 18 ವರ್ಷಗಳಲ್ಲಿ ತನ್ನ ಗಾನಸಿರಿ ಸಂಸ್ಥೆಯ ಮೂಲಕ ದಾಖಲೆಯ 20 ಸಾವಿರ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿದ ಡಾ. ಕಿರಣ್ ಕುಮಾರ್ ಗಾನಸಿರಿ ಇವರಿಗೆ
ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್(ರಿ) ಮತ್ತು ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಾತ್ಮಕ ಸಂಸ್ಥೆ , ಮೈಸೂರು ಈ ಸಂಸ್ಥೆ ವತಿಯಿಂದ ಪ್ರತಿಷ್ಠಿತ “ವಿಶ್ವ ಮಾನ್ಯ ಕನ್ನಡಿಗ” ಪ್ರಶಸ್ತಿಯನ್ನು ನವೆಂಬರ್ 24 ರಂದು ಮೈಸೂರಿನ ಇಂಜೀನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ದ.ಕ ಜಿಲ್ಲೆಯಲ್ಲಿ ತನ್ನದೇ ಆದ ವಿಶಿಷ್ಟ, ವಿಭಿನ್ನ ಶೈಲಿಯ ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಮನೆ ಮಾತಾಗಿರುವ ಸಂಸ್ಥೆ ಗಾನಸಿರಿ ಕಲಾ ಕೇಂದ್ರ… ಇದರ ಸಾರಥಿಯಾಗಿದ್ದುಕೊಂಡು ತಾನೂ ಹಾಡುತ್ತಾ ತನ್ನ ಸಾವಿರಾರು ವಿದ್ಯಾರ್ಥಿಗಳನ್ನೂ ಸಂಗೀತ ಕ್ಷೇತ್ರದಲ್ಲಿ ಬೆಳೆಸುತ್ತಾ ಕಳೆದ 18 ವರ್ಷಗಳಿಂದ ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಕಿರಣ್ ಕುಮಾರ್ ರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಮುಡಿಗೇರಿದೆ.
ಖ್ಯಾತ ಕವಯಿತ್ರಿ ಡಾ.ಲತಾ ರಾಜಶೇಖರ್ ಪ್ರಶಸ್ತಿ ಪ್ರದಾನ ಮಾಡಿದರು…ಹಿರಿಯ ಸಾಹಿತಿಗಳಾದ ಪ್ರೊ.ಕೆ ಭೈರವ ಮೂರ್ತಿ, ಆಸ್ಥಾನ ವಿದ್ವಾನ್ ಡಾ.ಸಿ ಪಿ ಕೃಷ್ಣ ಕುಮಾರ್, ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಡಾ.ಕಿರಣ್ ಕುಮಾರ್ ಸಹಿತ ನಾಡಿನ 11 ಜನ ಸಾಧಕರಿಗೆ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಾನಸಿರಿಯ ಡಾ.ಕಿರಣ್ ಕುಮಾರ್ ರಿಗೆ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ – ಕಹಳೆ ನ್ಯೂಸ್