ಬೆಂಗಳೂರು : 2020ರ ಜನವರಿ 9ರಿಂದ 24ರ ವರೆಗೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15ರ ವರೆಗೆ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಗೆ ಈಗಾಗಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವೇಳ ಪಟ್ಟಿ ಪ್ರಕಟಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ ಕನಗವಲ್ಲಿ, 2020ರ ಜನವರಿ 9ರಿಂದ 24ರ ವರೆಗೆ ರಾಜ್ಯದ ಎಲ್ಲಾ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ನಡೆಯುವ ಪರೀಕ್ಷೆಗೆ ಆಯಾ ವಿಷಯಾಧಾರಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ದ್ವಿತೀಯ ಪಿಯು ‘ಪೂರ್ವ ಸಿದ್ಧತಾ’ ಪರೀಕ್ಷಾ ವೇಳಾಪಟ್ಟಿ
ಜನವರಿ 9, 2020 – ಇಂಗ್ಲೀಷ್
ಜನವರಿ 10, 2020 – ಹಿಂದಿ
ಜನವರಿ 11, 2020 – ಅರ್ಥಶಾಸ್ತ್ರ, ಭೌತವಿಜ್ಞಾನ
ಜನವರಿ 13, 2020 – ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಜನವರಿ 14, 2020 – ತರ್ಕಶಾಸ್ತ್ರ(ಲಾಜಿಕ್), ಜಿಯಾಲಜಿ, ಶಿಕ್ಷಣ, ಗೃಹವಿಜ್ಞಾನ
ಜನವರಿ 16, 2020 – ಐಚ್ಛಿಕ ಕನ್ನಡ, ಅಕೌಂಟೆನ್ಸ್, ಗಣಿತ
ಜನವರಿ 17, 2020 – ಉರ್ದು, ಸಂಸ್ಕೃತ
ಜನವರಿ 18, 2020 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಜನವರಿ 20, 2020 – ಬಿಜಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನ ವಿಜ್ಞಾನ
ಜನವರಿ 21, 2020 – ಜಿಯೋಗ್ರಫಿ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಜನವರಿ 22, 2020 – ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಜನವರಿ 23, 2020 – ಇತಿಹಾಸ, ಜೀವವಿಜ್ಞಾನ, ಬೇಸಿಕ್ ಗಣಿತ
ಜನವರಿ 24, 2020 – ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ ವೆಲ್ ನೆಸ್ ( ಎನ್ ಎಸ್ ಕ್ಯೂ ಎಫ್)