Recent Posts

Friday, November 15, 2024
ಸುದ್ದಿ

ಬಾಹುಬಲಿಗೆ ಮಹಾಮಸ್ತಕಾಭಿಷೇಕ | ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ.

 

ಹಾಸನ : ಐತಿಹಾಸಿಕ ಬಾಹುಬಲಿ ಪ್ರತಿಮೆಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಸುಮಾರು 1035 ವರ್ಷಗಳ ಹಿಂದೆ ಸ್ಥಾಪನೆಯಾದ ಗೊಮ್ಮಟೇಶ್ವರ ಮೂರ್ತಿಗೆ ಪ್ರತೀ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತಿದ್ದು, ಈ ಬಾರಿ 88ನೇ ಮಹಾಮಸ್ತಕಾಭಿಷೇಕವನ್ನು ಜರುಗಿಸಲಾಗುತ್ತಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದ್ದು ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಬಾಹುಬಲಿ ಮಹಾಮಜ್ಜನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. ಇದೇ ಫೆಬ್ರವರಿ 14 ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಮಸ್ತಕಾಭಿಷೇಕದ ಆಡಳಿತ ಮಂಡಳಿ ಎರಡು ತಿಂಗಳ ಹಿಂದೆಯೇ ಪ್ರಧಾನಮಂತ್ರಿ ಯವರನ್ನ ಭೇಟಿಯಾಗಿ ಐತಿಹಾಸಿಕ ಸಮಾರಂಭಕ್ಕೆ ಬರುವಂತೆ ಆಹ್ವಾನ ನೀಡಿದ್ದರು‌. ಇದೀಗ ಪ್ರಧಾನಮಂತ್ರಿಯವರ ಆಗಮನ ಬಹುತೇಕ ಖಚಿತವಾಗಿದ್ದು, ಪ್ರಧಾನಮಂತ್ರಿ ಕಚೇರಿಯಿಂದ ಬರುವ ಅಧಿಕೃತ ಮಾಹಿತಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ..

ಇಂದು ರಾಷ್ಟ್ರಪತಿ ಯವರಿಂದ ಚಾಲನೆ..

ರಾಷ್ಟ್ರದ ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ರವರು ಕರ್ನಾಟಕಕ್ಕೆ ಈಗಾಗಲೇ ಆಗಮಿಸಿದ್ದು ಇಂದು 88 ನೇ ಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.‌ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಗಣ್ಯರು ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ವರದಿ : ಕಹಳೆ ನ್ಯೂಸ್

Leave a Response