ನವೆಂಬರ್ 30 ರಂದು ಪುತ್ತೂರಿನ ಮಹಾಮಾಯಿ ದೇವಸ್ಥಾನದ ಬಳಿಯ ಕ್ಯಾಂಪ್ಕೋ ಬಿಲ್ಡಿಂಗ್ ನಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ಉದ್ಘಾಟನೆ ; ಕಲ್ಲಡ್ಕ ಭಟ್, ಡಿ.ವಿ.ಎಸ್., ನಳೀನ್ ಭಾಗಿ – ಕಹಳೆ ನ್ಯೂಸ್
ಪುತ್ತೂರು : ನಗರದ ಮಹಾಮಾಯಿ ದೇವಸ್ಥಾನದ ಬಳಿಯ ಕ್ಯಾಂಪ್ಕೋ ಬಿಲ್ಡಿಂಗ್ ನಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ನೂತನವಾಗಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭವು ಇದೇ ತಿಂಗಳ 30 ರಂದು ಬೆಳಗ್ಗೆ 10.00 ಗಂಟೆಗೆ ನಡೆಯಲಿದೆ.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೆ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು, ಜನ ಔಷಧಿ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾನ್ಯ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಪ್ರಸನ್ನ. ಎಸ್. ಭಟ್ ಹಾಗೂ ಪ್ರಧಾನಮಂತ್ರಿ ಭಾರತೀಯ ಜನಔಷಧಿ ಪರಿಶೋಧನಾ ಕರ್ನಾಟಕ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ. ಅನಿಲಾ ದೀಪಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರು ಹಾಗೂ ಕ್ಯಾಂಪ್ಕೋ ನಿ. ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮಾಲೀಕರಾದ ಶಿವರಂಜನ್ ಎಂ ಸರ್ವರಿಗೂ ಸ್ವಾಗತ ಬಯಸಿದ್ದಾರೆ.