ನಾವು ಏನೋ ಆಗಬೇಕು ಎಂದು ಬಯಸ್ತಿವಿ ವಿಧಿ ಲಿಖಿತ ಇನ್ನೆಲ್ಲಿಗೊ ಕರೆತಂದು ಒಂದು ಸುಂದರ ಆಟವನ್ನು ನೋಡುತ್ತೆ ಪ್ರತಿಯೊಬ್ಬರ ಬದುಕು ಕೂಡ ನಾವು ಸುಂದರ ಎಂದು ಹೊರಗಣ್ಣಿನಿಂದ ನೋಡಿದಾಗ ಅದ್ಬುತ ಎಂದೆ ಅನಿಸುತ್ತೆ.
ಆ ಅದ್ಬುತ ಕ್ಷಣಕ್ಕೆ ಅದೆಷ್ಟೋ…. ದಿನಗಳ ಹಸಿವಿನ ತುಡಿತ, ತಾಳ್ಮೆ,ನೋವು, ಅಸಹಾಯಕ ಎನಿಸಿದರು ಕೂಡ ಎಂದಾದರು ಗುರಿ ಮುಟ್ಟಿ ತೋರಿಸುತ್ತೀನಿ ಎಂಬ ಚಪಲ ಆತನ ನಿದ್ರೆಯನ್ನೆ ಕದ್ದು ಬಿಡುತ್ತದೆ ಅಂತಹ ಒಬ್ಬ ಸಾಧಕನ ಬಗ್ಗೆ ನಾನು ನಿಮಗೆ ಪರಿಚಯ ಮಾಡಲು ತುಂಬಾ ಖುಷಿ ಅಂತ ಅನಿಸುತ್ತದೆ….. ಸದಾ ಹಸನ್ಮುಖಿ,ನೋವುಗಳಿದ್ದರು ನನಗಲ್ಲ ಎಂದು ಮೊಗವರಳಿಸುವ ಚೆಲುವ ನೋಟ ಕೈಯಲ್ಲಿ ಒಂದು ಮೈಕ್ ಸಿಕ್ಕರಂತು ಭಾಷಾ ಭಂಡಾರ….! ನಮಗಂತು ಪರಿಚಯ ಇಲ್ಲ ಎಂದು ತುಳುನಾಡಿನ ಜನ ಹೇಳಲಾರರು. ಪ್ರತಿಭೆ ಬಡತನದಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯಬೇಕು ಎಂಬ ಮಾತಿದೆ ಅದಕ್ಕೆ ಪೂರಕ ನಮ್ಮ ಪ್ರೀತಿಯ ಅಣ್ಣಾ ವಿ ಜೆ ಗುರುಪ್ರಸಾದ್ ಕೋಟ್ಯಾನ್… ಇವರು ನಡೆದ ಹಾದಿಯೇನೂ ಸುಗಮವಾಗಿರಲಿಲ್ಲ… ಅಪ್ಪ- ಅಮ್ಮನ ಮುದ್ದಿನ ನಿಧಿ ಇವರು. ಕಲಾದೇವಿ ಒಲಿದರೆ ಕಲ್ಲು ಕೂಡ ಮೂರ್ತಿ ರೂಪ ಪಡೆದು ಶೃಂಗಾರದ ರೂಪ ಪಡೆದುಕೊಳ್ಳಬಹುದು… ಇನ್ನೂ ಇವರ ಬಗ್ಗೆ ಹೇಳಬೇಕೆ ಅದ್ಬುತ ಕಲಾವಿದರು… ಹುಟ್ಟಿನಿಂದಲೇ ತುಂಟಾಟ, ತರ್ಲೆಗಳ ಜೊತೆಗೆ ನಾಟಕ,ಚಿತ್ರಕಲೆ, ಛದ್ಮವೇಷ,ಕಲಿಕೆ, ಕ್ರೀಡೆಗಳಲ್ಲಿ ಬಹಳ ಆಸಕ್ತಿಯುಳ್ಳವನಾಗಿದ್ದು, ಶಾಲಾ ದಿನಗಳಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ, ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡವರು. ಅಂತಹ ಆಸಕ್ತಿ ಇಂದು ದೊಡ್ಡ ದೊಡ್ಡ ವೇದಿಕೆಯಲ್ಲಿ ತನ್ನ ಮಾತುಗಾರಿಕೆ ಮೂಲಕ ಜನರ ಮನ ಸೇರುವ ಹೂವಾಗಿ ಅರಳಿದೆ.ಕಾಲೇಜು ದಿನಗಳಲ್ಲಿಯೇ ಮೈಕ್ ಹಿಡಿದು ನಿರೂಪಣೆ ಕ್ಷೇತ್ರಕ್ಕೆ ಕಾಲಿಟ್ಟ ಇವರು ಸುಮಾರು 1000ಕ್ಕೂ ಅಧಿಕ ವೇದಿಕೆಯಲ್ಲಿ ರಾಜ್ಯಾದ್ಯಂತ ನಿರೂಪಣೆ ಮಾಡಿದ್ದಾರೆ. ಜೊತೆಗೆ ಹಾಡುಗಾರ ಕೂಡ ಮೈಕ್ ಕೈಯಲಿದ್ದರೆ ಎಂತವರಾದರು ಒಮ್ಮೆ ಮಂತ್ರ ಮುಗ್ಧರಾಗಿ ಕುಳಿತು ಕೇಳುತ್ತಾರೆ.ಇವರಿಗೆ ಭಜನೆ ಗುರುಪ್ರಸಾದವಾಗಿ ಚಿಕ್ಕಂದಿನಿಂದಲೂ ಬಂದಿದೆ. ಅನೇಕ ವೇದಿಕೆಗಳಲ್ಲಿ ನೃತ್ಯವನ್ನು ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ ಇದಕ್ಕೆ ಪೂರಕವೆಂಬಂತೆ ತಾಲೂಕು ಮಟ್ಟದ ಯುವಜನ ಮೇಳದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು ಜನಮೆಚ್ಚುಗೆ ಪಡೆದಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ನಿರೂಪಿಸುವ ಕಲೆಗಾರ ಹತ್ತಾರು ಕಾರ್ಯಕ್ರಮಗಳ ತೀರ್ಪುಗಾರ ಆಗಿ ಕೂಡ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಇವರ ಮೊದಲ ಹೆಜ್ಜೆಯಾಗಿ ಕರಾವಳಿಯ ಪ್ರಸಿದ್ಧ ಮಾದ್ಯಮ ನಮ್ಮ ಟಿವಿ ಯಲ್ಲಿ ಗಲ್ಫ್ ರೌಂಡ್ ಎಂಬ ಕಾರ್ಯಕ್ರಮದ ನಿರೂಪಕನಾಗಿ ಶುರು ಮಾಡಿದ ಮಾದ್ಯಮದ ಪಯಣ ನಂತರದ ದಿನಗಳಲ್ಲಿ ದೈಜಿವಲ್ಡ್ ೨೪೭* ಮಾದ್ಯಮದಲ್ಲಿ ಕಾರ್ಯಕ್ರಮದ ನಿರೂಪಕನಾಗಿ ಮತ್ತು ಟಿವಿ ೭ ಮಾದ್ಯಮದಲ್ಲಿ ನಿರೂಪಕನಾಗಿ ಚಾಪುಮೂಡಿಸಿದ್ದಾರೆ…ಜೊತೆಗೆ ಅನೇಕ ನಾಟಕದಲ್ಲಿ ಅಭಿನಯಿಸಿದವರು ಗುರುಪ್ರಸಾದ್ ಕೋಟ್ಯಾನ್…… ಜಗತ್ತು ಬಣ್ಣದ ಲೋಕ ಎಂದು ನಾವು -ನೀವು ಬಣ್ಣಿಸುತ್ತೇವೆ…..! ಯಾವಾಗಲೂ ಕೂಡ ಬಣ್ಣಿಸುತ್ತಲೆ ಇರುತ್ತೇವೆ, ನಗುತ್ತೇವೆ,ನಗಿಸುತ್ತೇವೆ… ಈ ಮೂರು ದಿನಗಳ ಸಡಗರಕ್ಕೆ ಸಾಧಿಸುವುದು ಬಹಳ ಇರುತ್ತದೆ ಎಂಬ ಅವರ ಮಾತು ನಿಜಕ್ಕೂ ಸ್ಪೂರ್ತಿದಾಯಕ ತಮ್ಮ ದುಡಿಮೆಯಲ್ಲಿ 2000 ರೂಪಾಯಿಯನ್ನು ಪ್ರತಿತಿಂಗಳು ಬಡವರಿಗಾಗಿ ಮೀಸಲಿಡುವ ಇವರ ಗುಣ ನಿಜಕ್ಕೂ ಇವರ ನಡೆಯು ರಾಜಮಾರ್ಗ ಎಂದೇ ಹೇಳಬಹುದು. ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿ ನಮ್ಮ ದೇಶದಲ್ಲಿರುವ ಬಡವರಿಗೆ ಸಹಾಯ ಮಾಡುದೇ ನನ್ನ ಗುರಿ ಎನ್ನುವ ಅವರ ಮಾತಲ್ಲಿ ದೇಶಭಕ್ತಿಯನ್ನು ಕಾಣಬಹುದು, ಜೊತೆಗೆ ತಾವು ನಡೆದು ಬಂದ ಹಾದಿ ಮತ್ಯಾರಿಗೂ ಕೂಡ ಸಿಗಬಾರದು ಎಂದು ಸದಾ ಬಯಸುವಂತ, ನಡೆಯ ಸರದಾರನ ಬಗ್ಗೆ ನನಗೆ ನಿಮ್ಮ ಮುಂದೆ ಹೇಳುವುದೆ ಒಂದು ಹೆಮ್ಮೆ ಎನಿಸುತ್ತದೆ….. ಸದಾ ಈ ನಗುವಿನೊಂದಿಗೆ ಇನ್ನೂ ಸಾವಿರಗಳು ಒಟ್ಟುಗೂಡಿ ಸಂಭ್ರಮ ಕಳೆಗಟ್ಟಲಿ ಎಂಬುದಷ್ಟೇ ನನ್ನ ಆಶಯ….