ನವದೆಹಲಿ : ಭಾರತೀಯ ವಾಯು ಸೇನೆ(ಐಎಎಫ್) ಖಾಲಿ ಇರುವ 249 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆನ್ ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 30 ಆಗಿರುತ್ತದೆ.
ಭಾರತೀಯ ವಾಯು ಪಡೆಯಲ್ಲಿ ಖಾಲಿ ಇರುವಂತ ಂಈಅಂಖಿ ಇಟಿಣಡಿಥಿ ಮತ್ತು ಓಅಅ Sಠಿeಛಿiಚಿಟ ಇಟಿಣಡಿಥಿ ಆಫೀಸರ್ಸ್ 249 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂತಹ ಹುದ್ದೆಗಳಿಗೆ ಡಿಸೆಂಬರ್ 1ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಕೊನೆಯ ದಿನಾಂಕ ಡಿಸೆಂಬರ್ 30, 2019 ಆಗಿರುತ್ತದೆ.
ವಿದ್ಯಾರ್ಹತೆ, ಭಾರತೀಯ ವಾಯು ಪಡೆ ಪ್ರಕಟಿಸಿದ ಉದ್ಯೋಗ ನೇಮಕಾತಿಯಂತೆ ಇರಲಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕಾರ್ಯನಿರ್ವಹಿಸಲು ಸಿದ್ಧರಿರಬೇಕಾಗಿರುತ್ತದೆ.
ವಯೋಮಿತಿ – ಫ್ಲೈಯಿಂಗ್ ಬ್ರ್ಯಾಂಚ್ ಹುದ್ದಗೆ 20-24 ವರ್ಷದೊಳಗೆ ಇರಬೇಕು (01-01-2001ರ ಒಳಗೆ ಜನಿಸಿರಬೇಕು) ಗ್ರೌಂಡ್ ಡ್ಯೂಟಿ (ಟೆಕ್ನಿಷಿಯನ್- ನಾನ್ ಟೆಕ್ನಿಷಿಯನ್ ( ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20ರಿಂದ 26 ವರ್ಷವನ್ನು ಹೊಂದಿರಬೇಕು (01-01-2001ರ ಒಳಗ ಜನಿಸಿರಬೇಕು)
ಅರ್ಜಿ ಸಲ್ಲಿಸಲು ನಿಗಧಿ ಪಡಿಸಲಾಗಿರುವ ಶುಲ್ಕ – ರೂ.250 ಆಗಿರುತ್ತದೆ. ಇಂತಹ ನೇಮಕಾತಿಗೆ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಭಾರತೀಯ ವಾಯು ಪಡೆಯಲ್ಲಿ ಕರೆದಿರುವ ಈ 249 ಹುದ್ದೆಗಳಿಗೆ ಅರ್ಜಿಯ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಷ್ ಕಾಫಿಗಾಗಿ ಇಲ್ಲಿ ಕ್ಲಿಕ್ ಮಾಡಿ.. ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು – ಅರ್ಜಿ ಸಲ್ಲಿಕೆ ಆರಂಭ 01-12-2019, ಕೊನೆಯ ದಿನಾಂಕ 30-12-2019