Monday, November 25, 2024
ಸುದ್ದಿ

ಗುಂಡ್ಲುಪೇಟೆಯಲ್ಲಿ ಹಂದಿ-ದನಗಳ ಉಪಟಳ – ಕಹಳೆ ನ್ಯೂಸ್

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಜನತೆ ಸದಾ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಈಗಾಗಲೇ ಮೂಲಭೂತ ಸೌಲಭ್ಯಗಳೇ ಸಮರ್ಪಕವಾಗಿ ಸಿಕ್ಕಿಲ್ಲ.

ಇದರ ನಡುವೆ ಬೀದಿಗೆ ಕಾಲಿಟ್ಟರೆ ಬೀಡಾಡಿ ದನ ಮತ್ತು ಹಂದಿಗಳ ಹಾವಳಿಯೂ ಹೆಚ್ಚಾಗಿದ್ದು ಹಿಡಿ ಶಾಪ ಹಾಕಿಕೊಂಡು ಜೀವನ ಮಾಡುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಂಡ್ಲುಪೇಟೆ ಪಟ್ಟಣದ ಪುರಸಭೆ ಇತ್ತೀಚಿಗೆ ಸ್ವಚ್ಛತೆ ಬಗ್ಗೆ ಪ್ರವಚನಗಳನ್ನು ಹೇಳುವುದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಆದರೆ ಪಟ್ಟಣದಲ್ಲಿ ಹಂದಿಗಳ ಕಾಟ ಮಾಮೂಲಾಗಿಬಿಟ್ಟಿದೆ. ಈ ಕುರಿತು ಹಂದಿಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪುರಸಭೆ ನಿರ್ಲಕ್ಷವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣದ ಹೆಚ್ಚಿನ ಬಡಾವಣೆಗಳಲ್ಲಿ ಹಂದಿಗಳು ಅಲ್ಲಲ್ಲಿ ವಾಸಸ್ಥಾನ ಮಾಡಿಕೊಂಡಿರುವುದರಿಂದ ಅವುಗಳು ಇರುವ ಸ್ಥಳದ ಸುತ್ತ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ, ಬಡಾವಣೆಗಳಲ್ಲಿ ಇರುವ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಪುರಸಭೆಯು ಅವುಗಳನ್ನು ಸ್ವಚ್ಛಗೊಳಿಸಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹಂದಿಗಳು ಬಿದ್ದು ಹೊರಳಾಡಿ ಸುತ್ತಲಿನ ಪರಿಸರವನ್ನೇ ಮಲಿನಗೊಳಿಸುತ್ತಿವೆ. ಇದರಿಂದ ಪಾದಚಾರಿಗಳಿಗೆ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಇಷ್ಟಾzರೂ ಸೂಕ್ತ ಕ್ರಮ ಕೈಗೊಳ್ಳದ ಪುರಸಭಾ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ವಚ್ಛ ಭಾರತ್ ಅಭಿಯಾನ ಎಂದು ಹೇಳಿಕೊಂಡು ಪರಿಸರವನ್ನು ಶುಚಿಯಾಗಿರಿಸಿ ಎಂದು ಭಾಷಣ ಬಿಗಿಯುವ ಜನಪ್ರತಿನಿದಿಗಳಿಗೆ ಇಂತಹ ಜ್ವಲಂತ ಸಮಸ್ಯೆ ಕಾಣಿಸುತ್ತಿಲ್ಲ ಏಕೆ ಎಂಬುದು ಜನರ ಪ್ರಶ್ನೆಯಾಗಿದೆ.

ಇನ್ನು ಪಟ್ಟಣದ ಜಂಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಳಚರಂಡಿ ವ್ಯವಸ್ಥೆ ಆಗಬೇಕಿದೆ ಹಾಗೂ ಚರಂಡಿಗಳ ಸ್ವಚ್ಛತೆಯೂ ನಡೆಯಬೇಕಿದೆ. ಇದರ ಜತೆಗೆ ಪಟ್ಟಣದಲ್ಲಿ ಬೀಡಾಡಿ ದನಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದು ಅವುಗಳಿಂದಲೂ ವಾಹನ ಸಂಚಾರಕ್ಕೆ ಹಿಂಸೆಯಾಗುತ್ತಿದೆ. ಪುರಸಭೆ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.