ಮಂಗಳೂರು: ಈರುಳ್ಳಿ ಬೆಲೆ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ಇದೀಗ ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋವೊಂದಕ್ಕೆ ನೂರು ರೂಪಾಯಿಯನ್ನೂ ಗಡಿ ದಾಟಿದೆ.
ನಗರದ ಮಾರುಕಟ್ಟೆಗೆ ಸ್ಥಳೀಯ ಸರಬರಾಜುದಾರರಿಂದ ಪೊರೈಕೆಯಾಗುತ್ತಿರುವ ಈರುಳ್ಳಿಯ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈಜಿಪ್ಟಿನ ಈರುಳ್ಳಿಯನ್ನು ಕೆಲವು ವ್ಯಾಪಾರಿಗಳು ಮಾರುಕಟ್ಟೆಗೆ ಆಮದು ಮಾಡಿಕೊಂಡಿದ್ದಾರೆ. ಆದರೂ ಎರಡೇ ದಿನದಲ್ಲಿ ಈರುಳ್ಳಿ ದರ ನೂರರ ಗಡಿ ದಾಟಿರುವುದು ಗ್ರಾಹಕರಿಗೆ ಆತಂಕವನ್ನುಂಟು ಮಾಡಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕೆ.ಜಿ.ಗೆ ರೂ.50ರಿಂದ ಆರಂಭಗೊಂಡು ದೊಡ್ಡ ಈರುಳ್ಳಿಯ ಬೆಲೆ ರೂ.109ಕ್ಕೆ ಏರಿಕೆಯಾಗಿದೆ.
ಈ ಬಾರಿಗೆ ವಿವಿಧೆಡೆ ಉಂಟಾಗಿರುವ ಅತಿವೃಷ್ಟಿಯಿಂದ ತರಕಾರಿ ಬೆಳೆಗೆ ಅಪಾರ ಹಾನಿಯುಂಟಾಗಿದೆ. ಈರುಳ್ಳಿ ಬೆಳೆಗೆ ಅತಿವೃಷ್ಟಿ ಸಾಕಷ್ಟು ಹಾನಿಯಾಗಿರುವುದು ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವಕ್ಕೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.