ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನರೇಂದ್ರ ಮೋದಿ, ಅಮಿತ್ ಷಾ ಅವರಿಗೆ ಇದೆಯಾ ಆಹ್ವಾನ? ಶಿವಸೇನೆ ಹೇಳಿದ್ದೇನು ಗೊತ್ತಾ- ಕಹಳೆ ನ್ಯೂಸ್
ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನರೇಂದ್ರ ಮೋದಿ, ಅಮಿತ್ ಷಾ ಅವರಿಗೆ ಇದೆಯಾ ಆಹ್ವಾನ? ಶಿವಸೇನೆ ಹೇಳಿದ್ದೇನು ಗೊತ್ತಾ.?
ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಮೈತ್ರಿಯಿಂದ ಹೊರಬಿದ್ದು ಎನ್ಸಿಪಿ-ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚನೆ ಮಾಡಲು ಈಗಾಗಲೇ ಹಕ್ಕು ಮಂಡನೆ ಮಾಡಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಿಗೆ ಆಮಂತ್ರಣ ನೀಡಲು ಶಿವಸೇನೆ ನಿರ್ಧಾರ ಮಾಡಿದೆ. ಅವರನ್ನು ಸಮಾರಂಭಕ್ಕೆ ಆಹ್ವಾನಿಸುವುದಾಗಿ ಪಕ್ಷ ಮಂಗಳವಾರ ಹೇಳಿದೆ.
ಮೂರು ಪಕ್ಷಗಳ ಸಭೆಯ ಬಳಿಕ ಸಂಜಯ್ ರಾವತ್ ಬಳಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಹಾಗೂ ಅಮಿತ್ ಷಾ ಆಗಮಿಸಲಿದ್ದಾರಾ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅವರು, ನಾವು ಎಲ್ಲರಿಗೂ ಆಮಂತ್ರಣ ನೀಡುತ್ತೇವೆ. ಹಾಗೇ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೂ ಆಹ್ವಾನ ಇದೆ ಎಂದು ತಿಳಿಸಿದ್ದಾರೆ.