Wednesday, January 22, 2025
ಸಿನಿಮಾ

ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ ಮಂದಣ್ಣ! ಕಾರಣವೇನು ಗೊತ್ತಾ – ಕಹಳೆ ನ್ಯೂಸ್

ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ ಮಂದಣ್ಣ! ಕಾರಣವೇನು ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ಸ್ವತಃ ರಶ್ಮಿಕಾ ಬಾಲಿವುಡ್ ಆಫರ್ ತಿರಸ್ಕರಿಸಿದ್ದಾರಂತೆ.

ತೆಲುಗು ಜೆರ್ಸಿ ಸಿನಿಮಾದ ಹಿಂದಿ ರಿಮೇಕ್ ಗೆ ಶಾಹಿದ್ ಕಪೂರ್ ಗೆ ಜೋಡಿಯಾಗಿ ಅಭಿನಯಿಸಲು ರಶ್ಮಿಕಾಗೆ ಆಫರ್ ನೀಡಲಾಗಿತ್ತು. ಆದರೆ ರಶ್ಮಿಕಾ ಡೇಟ್ಸ್ ಸಮಸ್ಯೆ ಎಂಬ ಕಾರಣವೊಡ್ಡಿ ಬಾಲಿವುಡ್ ಆಫರ್ ತಿರಸ್ಕರಿಸಿದ್ದಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲಗಳ ಪ್ರಕಾರ ನಿಜವಾಗಿಯೂ ರಶ‍್ಮಿಕಾ ಸಿನಿಮಾ ತಿರಸ್ಕರಿಸಿದ್ದಕ್ಕೆ ಕಾರಣ ಡೇಟ್ಸ್ ಸಮಸ್ಯೆಯಲ್ಲ. ಸಂಭಾವನೆ ತಾನು ಕೇಳಿದಷ್ಟು ಕೊಡಲಿಲ್ಲ ಎಂಬ ಕಾರಣಕ್ಕೆ ಹೊರಬಂದಿದ್ದಾರೆ ಎನ್ನಲಾಗಿದೆ. ಅದೇನೇ ಇದ್ದರೂ ಇದೀಗ ರಶ್ಮಿಕಾ ಜಾಗಕ್ಕೆ ಮೃಣಾಲ್ ಠಾಕೂರ್ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು