Recent Posts

Monday, January 20, 2025
ಸುದ್ದಿ

ಶಾಕಿಂಗ್ ನ್ಯೂಸ್’ : ಆನ್ ಲೈನ್ ನಲ್ಲಿ ಡ್ರೆಸ್ ಖರೀದಿಸಲು ಹೋದ ಯುವತಿಗೆ ಭಾರಿ ವಂಚನೆ, ಎಚ್ಚರ ಗ್ರಾಹಕ ಎಚ್ಚರ.- ಕಹಳೆ ನ್ಯೂಸ್

ಬೆಂಗಳೂರು : ನೀವು ಆನ್ ಲೈನ್ ನಲ್ಲಿ ಶಾಪಿಂಗ್ ಮಾಡ್ತೀರಾ…. ಹಾಗಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದ್ರೆ ಇಲ್ಲಿ ಯುವತಿಯೊಬ್ಬರು ಆನ್ ಲೈನ್ ನಲ್ಲಿ ಬಟ್ಟೆ ಖರೀದಿಸಲು ಹೋಗಿ ಬರೋಬರಿ 80 ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.

ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಶ್ರವಣ ಎಂಬಾಕೆ, ಆನ್​​ಲೈನ್​ಲ್ಲಿ 800 ರೂಪಾಯಿಯ ಕುರ್ತಾ ಖರೀದಿಸಲು ಹೋಗಿ 80 ಸಾವಿರ ಹಣವನ್ನು ಕಳೆದುಕೊಂಡಿದ್ದಾರೆ. ಶ್ರವಣ ಅವರು ಇ-ಕಾಮರ್ಸ್​​ ಆಯಪ್​ ಮೂಲಕ ನವೆಂಬರ್ 8ರಂದು ಕುರ್ತಾ ಒಂದನ್ನು ಆರ್ಡರ್​​ ಮಾಡಿದ್ದರು. ಅದರ ಬೆಲೆ 800 ರೂ.ಮಾತ್ರ. ಆದರೆ ಆರ್ಡರ್​ ಮಾಡಿದ್ದ ಕುರ್ತಾ ಆಕೆಯ ಕೈ ತಲುಪಿರಲಿಲ್ಲ. ಹೀಗಾಗಿ ಯುವತಿ ಆಯಪ್​ನಲ್ಲಿ ಲಭ್ಯವಿದ್ದ ಕಸ್ಟಮರ್ ಕೇರ್​ ಸೆಲ್​ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಕಸ್ಟಮರ್ ಕೇರ್​ ಎಕ್ಸಿಕ್ಯೂಟಿವ್​, ನಿಮ್ಮ ಆರ್ಡರ್​​ ಕ್ಯಾನ್ಸಲ್​ ಮಾಡುತ್ತೇವೆ, ನಾವು ಆನ್​ಲೈನ್​ನಲ್ಲಿ ಕಳುಹಿಸುವ ಲಿಂಕ್​​ ಕ್ಲಿಕ್​ ಮಾಡಿ, ಅಲ್ಲಿ ಬರುವ ಅಫ್ಲಿಕೇಶನ್​ ಭರ್ತಿ ಮಾಡಿ ಎಂದು ಹೇಳಿದ್ದರು. ಅದರಂತೆಯೇ ಯುವತಿ ಅಫ್ಲಿಕೇಶನ್​ ಪೂರ್ಣ ಮಾಡಿ, ಅಲ್ಲಿ ಕೇಳಿದ್ದ ಬ್ಯಾಂಕ್​ ಖಾತೆಯ ಮಾಹಿತಿಯನ್ನು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಆಕೆಯ ಮೊಬೈಲ್​ಗೆ ಒಟಿಪಿ ನಂಬರ್ ಬಂದಿತ್ತು. ಕಸ್ಟಮರ್​ ಕೇರ್​ ಎಕ್ಸಿಕ್ಯೂಟಿವ್​ OTP ನಂಬರ್​ ಶೇರ್ ಮಾಡುವಂತೆ ಯುವತಿಗೆ ಹೇಳಿದ್ದ. ಅದರಂತೆಯೇ ಆಕೆ OTP ನಂಬರ್​ ಕೊಟ್ಟಿದ್ದಳು. ನಂಬರ್ ಶೇರ್​ ಮಾಡಿದ ಕೆಲವೇ ಕ್ಷಣಗಳಲ್ಲಿ 79,600 ರೂಪಾಯಿ ಮಹಿಳೆಯ ಬ್ಯಾಂಕ್​ ಖಾತೆಯಿಂದ ಕಡಿತಗೊಂಡಿರುವ ಮೆಸೇಜ್​ ಬಂದಿದೆ. ವಂಚನೆಗೊಳಗಾದ ಶ್ರವಣ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ…

ಜಾಹೀರಾತು
ಜಾಹೀರಾತು
ಜಾಹೀರಾತು