Recent Posts

Monday, January 20, 2025
ಸುದ್ದಿ

ನಾರಾಯಣ ಗುರು ಸೇವಾ ಸಂಘ(ರಿ.)ಮಾಣಿ ಇದರ ಬಿಲ್ಲವ ಗ್ರಾಮ ಸಮಿತಿ ಮಾಣಿ ಯ ವಾರ್ಷಿಕ ಸಭೆಯು ದಿ.26-11-19ರಂದು ನಡೆಯಿತು- ಕಹಳೆ ನ್ಯೂಸ್

ನಾರಾಯಣ ಗುರು ಸೇವಾ ಸಂಘ(ರಿ.)ಮಾಣಿ ಇದರ ಬಿಲ್ಲವ ಗ್ರಾಮ ಸಮಿತಿ ಮಾಣಿ ಯ ವಾರ್ಷಿಕ ಸಭೆಯು ದಿ.26-11-19ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಬಿಲ್ಲವ ಸಂಘ ಮಾಣಿ ಇದರ ಅಧ್ಯಕ್ಷರಾದ ನಾರಾಯಣ ಸಾಲ್ಯನ್,ಗ್ರಾಮ ಸಮಿತಿ ಅಧ್ಯಕ್ಷರಾದ ದಯಾನಂದ ಕಾಪಿಕಾಡು,ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರು ತ್ರಿವೇಣಿ ರಮೇಶ್ ಮುಜಲ,ಬಾಕಿಲ ಉಳ್ಳಾಲ್ತಿ ವೈದ್ಯನಾಥ,ಕೋಟಿ ಚೆನ್ನಯ ಗರಡಿ ಅಧ್ಯಕ್ಷರಾದ ವಸಂತ ಜಲ್ಲಿಗುಡ್ಡೆ,ಅರ್ಚಕರಾದ ಜನಾರ್ದನ ಬಾಕಿಲ ಇದ್ದರು,ಯುವವಾಹಿನಿ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ,ರಾಜೇಶ್ ಬಾಬನಕಟ್ಟೆ,ಸತೀಶ್ ಬಾಯಿಲ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.ಮಾಣಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಯಶೋಧರ ಪೂಜಾರಿ ಕೊಡಾಜೆ, ಗಣೇಶ್ ಪೂಜಾರಿ ಕೊಡಾಜೆ ಕಾರ್ಯದರ್ಶಿ, ನಾಗರಾಜ ಪೂಜಾರಿ ಕೋಡಿ,ಉಪಾಧ್ಯಕ್ಷರಾಗಿ ಆಯ್ಕೆಯಾದರು.

 

ಸಲಹೆಗಾರರಾಗಿ ಜನಾರ್ದನ ವಿಠಲಕೋಡಿ, ಗಿರಿಯಪ್ಪ ಪೂಜಾರಿ ಕಾಪಿಕಾಡು ಮತ್ತು ಸಂಘಟನಾ ಕಾರ್ಯದರ್ಶಿ ದಯಾನಂದ ಪೂಜಾರಿ ಕೊಡಾಜೆ ನೇಮಿಸಲಾಯಿತು.

ಗ್ರಾಮ ಸಮಿತಿಯ ಮಹಿಳಾ ಸಂಘಟನೆ ಅಧ್ಯಕ್ಷರಾಗಿ ಭಾರತಿ ಜನಾರ್ಧನ ಮರು ಅಯ್ಕೆಯಾದರು.ರಮಣೀ ಪೂಜಾರಿ ಉಪಾಧ್ಯಕ್ಷರಾದರು.

 

ವಸಂತ ಪೂಜಾರಿ ಮಾತನಾಡಿ, ಬಾಕಿಲ ಬ್ರಹ್ಮಕಲಶೋತ್ಸವಕ್ಕೆ ಎಲ್ಲಾ ರೀತಿಯಲ್ಲಿ ಸಹಕರಿಸುವಂತೆ ಸಭೆಯಲ್ಲಿ ವಿನಂತಿಸಿಕೊಂಡರು.ನಂತರ ಬ್ರಹ್ಮ ಕಲಶೋತ್ಸವ ಸಮಿತಿ ರಚಿಸಲಾಯಿತು. ಜಗದೀಶ್ ವಿಠಲಕೋಡಿ ಅಧ್ಯಕ್ಷರು,ಸಂದೀಪ್ ಕಾಪಿಕಾಡು ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಗಂಗಾಧರ ಕಾಪಿಕಾಡು ಮತ್ತು ಜಯಂತ ವಿಠಲಕೋಡಿ ಇವರನ್ನು ಆಯ್ಕೆಮಾಡಲಾಯಿತು.

ನಾರಾಯಣ ಸಾಲ್ಯಾನ್ ಸಭೆಯಲ್ಲಿ ಮಾತಾಡಿ,ಮುಂದಿನ ಬಿಲ್ಲವ ಸಂಘದ ಬೆಳ್ಳಿಹಬ್ಬದ ಕಾರ್ಯಕ್ರಮ ಮತ್ತು ನಮ ಬಿರುವೆರ್ ಸಮಾವೇಶದ ಬಗ್ಗೆ ಮಾಹಿತಿ ನೀಡಿ ಎಲ್ಲರೂ ಭಾಗವಹಿಸುವಂತೆ ವಿನಂತಿಸಿಕೊಂಡರು.ಗೆಜ್ಜೆಗೆರಿ ಕ್ಷೇತ್ರದ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದಯಾನಂದ ಕಾಪಿಕಾಡು, ಕಾರ್ಯದರ್ಶಿ ವರುಣ್, ಉಪಾಧ್ಯಕ್ಷರಾಗಿ ಕರುಣಾಕರ ಲಕ್ಕಪ್ಪಕೋಡಿ,ಗಿರೀಶ್ ಕಾಪಿಕಾಡು ಇವರು ಅಯ್ಕೆಗೊಂಡರು.

ಮಹಿಳಾ ಘಟಕದ ಅಧ್ಯಕ್ಷರು ತ್ರಿವೇಣಿ ರಮೇಶ್ ಮಾತಾಡಿ,ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಂಡು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಕೊನೆಯಲ್ಲಿ ನೂತನ ಅಧ್ಯಕ್ಷರು ಮಾತಾಡಿ,ಧನ್ಯವಾದಗಳೊಂದಿಗೆ ಸಭೆಯನ್ನು ಮುಕ್ತಗೊಳಿಸಲಾಯಿತು.ಸಭೆಯನ್ನು ವಿಠಲಕೋಡಿ ಜನಾರ್ದನ ಪೂಜಾರಿ ಇವರ ಮನೆಯಲ್ಲಿ ನಡೆಸಲಾಯಿತು.