Monday, January 20, 2025
ಸುದ್ದಿ

ಮಂಗಳೂರಿನಲ್ಲಿ ಹಿಟ್ ಆಂಡ್ ರನ್ – ಲಾರಿ ಹರಿದು ಬ್ಯೂಟಿಷಿಯನ್ ದಾರುಣ ಸಾವು – ಕಹಳೆ ನ್ಯೂಸ್

ಮಂಗಳೂರು, ನ 27 : ಹಿಂಬದಿಯಿಂದ ಬಂದ ಲಾರಿಯೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಸವಾರ ಮಹಿಳೆ ಮೇಲೆ ಲಾರಿ ಚಲಾಯಿಸಿ ಲಾರಿ ಸಮೇತ ಚಾಲಕ ಪರಾರಿಯಾದ ಘಟನೆ ನ.27 ರ ಬುಧವಾರ ಮಧ್ಯಾಹ್ನ ನಡೆದಿದೆ. ಘಟನೆಯ ಪರಿಣಾಮ ಸ್ಕೂಟರ್ ಸವಾರೆ ಮೃತಪಟ್ಟಿದ್ದಾರೆ.

ಮೃತ ಮಹಿಳೆಯನ್ನು ಪಂಜಿಮೋಗರು ನಿವಾಸಿ ಯೋಗೀಶ್ ಅವರ ಪತ್ನಿ ಪ್ರಿಯಾ ಯಸ್ ಸುವರ್ಣ (42) ಎಂದು ಗುರುತಿಸಲಾಗಿದೆ. ಪ್ರಿಯಾ ಪಂಜಿಮೊಗೇರು ಬಳಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ನಗರದ ಕುಂಟಿಕಾನ ಬಳಿ ಇರುವ ಖಾಸಗಿ ಹೊಟೇಲ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಪ್ರಿಯಾ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಹಿಂಬದಿಯಲ್ಲಿ ಬಂದ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಪ್ರಿಯಾ ರಸ್ತೆಗುರುಳಿದ್ದು ಈ ವೇಳೆ ಆಕೆಯ ಮೇಲೆಯೇ ಲಾರಿ ಚಲಾಯಿಸಿದ ಲಾರಿ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಲಾರಿ ಹರಿದ ಪರಿಣಾಮ ಪ್ರಿಯಾ ಅವರ ತಲೆಯ ಭಾಗ ಸಂಪೂರ್ಣ ಜಜ್ಜಿ ಹೋಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಾರಿಯಾದ ಲಾರಿ ಚಾಲಕನನ್ನು ಕುದುರೆಮುಖದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಪ್ರಿಯಾ ಅವರು ಇಬ್ಬರು ಮಕ್ಕಳಾದ ಪ್ರತೀಶ್ (15) ಪ್ರೀಶ್ಮಾ(10) ಹಾಗೂ ಪತಿಯನ್ನು ಅಗಲಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ