Thursday, November 28, 2024
ಸುದ್ದಿ

ರಾತ್ರೋರಾತ್ರಿ ರೈತರಿಗೆ ಶಾಕ್: ಜಮೀನಿನಿಂದಲೇ ಮಾಯವಾಯ್ತು ಈರುಳ್ಳಿ – ಕಹಳೆ ನ್ಯೂಸ್

ರಾತ್ರೋರಾತ್ರಿ ರೈತರಿಗೆ ಶಾಕ್: ಜಮೀನಿನಿಂದಲೇ ಮಾಯವಾಯ್ತು ಈರುಳ್ಳಿ

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದಲ್ಲಿ ರಾತ್ರೋರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ದೋಚಲಾಗಿದೆ.

ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಸಿಕ್ಕ ಅಲ್ಪ ಬೆಳೆಗೆ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಈ ಜಮೀನಿನಲ್ಲಿ ಕೊಯ್ಲಿಗೆ ಬಂದ ಈರುಳ್ಳಿ ಕಾಯ್ದುಕೊಳ್ಳುವುದೇ ರೈತರಿಗೆ ಸವಾಲಿನ ಕೆಲಸವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆ ಮತ್ತು ನೆರೆ ಹಾನಿಯಿಂದ ಈ ಬಾರಿ ಇಳುವರಿ ಕಡಿಮೆಯಾಗಿದೆ. ಜಮೀನಿನಲ್ಲಿರುವ ಅಲ್ಪಸ್ವಲ್ಪ ಈರುಳ್ಳಿಯನ್ನು ಕೂಡ ಕಳ್ಳರು ರಾತ್ರಿವೇಳೆ ಕಳವು ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ನರೇಗಲ್ ಗ್ರಾಮದಲ್ಲಿ ಗುರು ಬಸವಯ್ಯ ಪ್ರಭುಸ್ವಾಮಿ ಮಠ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಮೂಟೆ ಈರುಳ್ಳಿಯನ್ನು ಕಳವು ಮಾಡಲಾಗಿದೆ. ಎರಡು ದಿನದಲ್ಲಿ ಅವರು ಈರುಳ್ಳಿ ಕಟಾವು ಮಾಡಬೇಕಿತ್ತು. ಆದರೆ ಫಸಲು ಕೈಗೆ ಬರುವ ಮೊದಲೇ ಕಳ್ಳರು 40ಮೂಟೆ ಈರುಳ್ಳಿ, 25 ಕೆಜಿ ಮೆಣಸಿನಕಾಯಿ ಕಳವು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು