Wednesday, January 22, 2025
ಸುದ್ದಿ

ಪುತ್ತೂರು: ಕಬಕ ಕಲ್ಲಂದಡ್ಕ ಶೂಟೌಟ್ ಪ್ರಕರಣ; ರೌಡಿ ಶೀಟರ್ ಜೋಗಿ ಹನೀಫ್ ಬಂಧನ- ಕಹಳೆ ನ್ಯೂಸ್

ಪುತ್ತೂರು: ಕಬಕ ಸಮೀಪದ ಕೊಡಿಪಾಡಿ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನ.26ರ ಮಂಗಳವಾರ ಮುಸ್ಸಂಜೆ ವೇಳೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ನೀಡಿದ ದೂರಿನಂತೆ ಪುತ್ತೂರು ನಗರ ಠಾಣಾ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಪ್ರಕರಣದ ಓರ್ವ ಆರೋಪಿ ಕೇಪು ಗ್ರಾಮದ ಕುಕ್ಕಿಗಟ್ಟು ನೀರ್ಕಾಜೆ ನಿವಾಸಿ ಹಸನ್ ಎಂಬವರ ಪುತ್ರ ಹನೀಫ್ ಜೋಗಿ (39) ಇವರನ್ನು ನ.28 ರಂದು ಗುಂಡ್ಯದ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.

ಆರೋಪಿಯನ್ನು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಕೊಡಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಂದಡ್ಕ ನಿವಾಸಿ ಅಬ್ದುಲ್ ಖಾದರ್ (45) ಅವರಿಗೆ ಮಂಗಳವಾರ ಸಂಜೆ ಕಾರಿನಲ್ಲಿ ಬಂದ ತಂದ ಮನೆ ಸಮೀಪದಲ್ಲೇ ಗಂಡು ಹಾರಿಸಿ ಪರಾರಿಯಾಗಿತ್ತು. ಗಂಭೀರಗಾಯಗೊಂಡಿರುವ ಅಬ್ದುಲ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಬ್ಬುಲ್ ಖಾದರ್ ಮೇಲೆ 2 ವರ್ಷದ ಹಿಂದೆ ಕಬಕ ಪೆಟೆಯಲ್ಲಿ ದಾಳಿ ನಡೆದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ಆದೇಶದಂತೆ ೪ ತನಿಖಾ ತಂಡಗಳು ರಚನೆಯಾಗಿತ್ತು. ಪಶ್ಚಿಮ ವಲಯ ಐಜಿಪಿ ಯವರ ಖಚಿತ ಮಾಹಿತಿ ಮೇರೆಗೆ ದ.ಕ ಜಿಲ್ಲಾ ಎಸ್ ಪಿ ಮತ್ತು ಡಿ ವೈಎಸ್ ಪಿ ಮಾರ್ಗದರ್ಶನದಲ್ಲಿ ಪುತ್ತೂರು, ಉಪ್ಪಿನಂಗಡಿ ಡಿಸಿಐಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು