Wednesday, January 22, 2025
ಸುದ್ದಿ

ಚಂದನ ಸಾಹಿತ್ಯ ವೇದಿಕೆ ಯಿಂದ ಸಾಹಿತಿ ದಿ ಯುಸುಗೌ ರವರಿಗೆ ನುಡಿನಮನ – ಕಹಳೆ ನ್ಯೂಸ್

ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚಿಗೆ ದೈವಾಧೀನರಾದ ಸುಳ್ಯದ ಖ್ಯಾತ ಸಾಹಿತಿ ದಿ || ಯು .ಸುಬ್ರಾಯಗೌಡ ರವರಿಗೆ ನುಡಿನಮನ ಕಾರ್ಯಕ್ರಮವು ಶಿರ್ಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯಾಲಯದಲ್ಲಿ ನೆರವೇರಿತು . ಯುಸುಗೌ ಒಂದು ನೆನಪು ಮತ್ತು ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ಕಾರ್ಯಕ್ರಮದ ವಹಿಸಿ ” ಅಂತಾರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಸಂಸ್ಥೆಯ ವಲಯ ತರಬೇತುದಾರರಲ್ಲದೆ ಅತ್ಯುತ್ತಮ ಸಾಹಿತಿಯಾಗಿದ್ದ ಯುಸುಗೌ ಪ್ರಬುದ್ಧ ಗಣ್ಯವ್ಯಕ್ತಿಯಾಗಿದ್ದರು . ಸರ್ವರನ್ನು ಆದರದಿಂದ ಕಾಣುವ ಅವರ ಹೃದಯ ವೈಶಾಲ್ಯತೆ ಅನುಕರಣೀಯ ” ಎಂದರು . ಹಿರಿಯ ಸಾಹಿತಿ ನೀನಾಸು ರವರು ” ಯುಸುಗೌ ಮರೆಯದ ಮಾಣಿಕ್ಯ . ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಛಾಪನ್ನು ಮೂಡಿಸಿದವರು . ಉತ್ತಮ ಗೆಳೆಯರಾಗಿದ್ದ ಅವರು ಎಂದೂ ಕೋಪತಾಪ ಮಾಡಿದವರಲ್ಲ . ಒಬ್ಬ ಒಳ್ಳೆಯ ಸಾಹಿತಿಯನ್ನು ಕಳೆದುಕೊಂಡೆವು ” ಎಂದು ಮರುಗಿದರು . ಶ್ರೀ ಯೋಗೇಶ್ವರಾನಂದ ಸ್ವಾಮೀಜಿಯವರು ” ಒಡನಾಡಿಯಾಗಿದ್ದ ಸುಬ್ರಾಯಗೌಡರು ತುಂಬಿದ ಕೊಡ . ವಿಶೇಷ ಶೈಲೀಯ ಅವರ ಬರಹಗಳು ಜನಮಾನಸ ಮುಟ್ಟಿದ್ದವು .ಅವರ ಅರೆಭಾಷೆ ಲೇಖನಗಳು ಹಲವು ಪತ್ರಿಕೆಗಳಲ್ಲಿ ಓದಿದ್ದೆ . ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ” ಎಂದು ಪ್ರಾರ್ಥಿಸಿದರು . ಚಂದನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಸುಮಂಗಲಾ ಲಕ್ಷ್ಮಣ ಕೋಳಿವಾಡ , ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ಚಂದ್ರ ಪಂಡಿತ್ ಹಾಗೂ ಖ್ಯಾತ ಗಾಯಕ ಗಣೇಶ್ ಬಿ ಎಸ್ ರವರು ನುಡಿನಮನ ಸಲ್ಲಿಸಿದರು . ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು .ಇದೇ ಸಂದರ್ಭ ಸ್ವಾಮೀಜಿಯವರ 163 ನೇ ಪುಸ್ತಕವಾದ ಜೀವದ ಪಯಣ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು .

ಜಾಹೀರಾತು

ಜಾಹೀರಾತು
ಜಾಹೀರಾತು