Wednesday, January 22, 2025
ಸುದ್ದಿ

ದೇಹದಾಢ್ರ್ಯ ಸ್ಪರ್ಧೆಯಲ್ಲಿ ವಿಟ್ಲದ ಫಿಟ್‍ನೆಸ್ ಮಲ್ಟಿ ಜಿಮ್‍ನ ವಿದ್ಯಾರ್ಥಿ ಜೀವನ್ ವಿಟ್ಲ ಪ್ರಥಮ-ಕಹಳೆ ನ್ಯೂಸ್

ವಿಟ್ಲ: ವಿಟ್ಲ ಸೌತ್ ಕೆನರಾ ಹವ್ಯಾಸಿ ದೇಹದಾಢ್ರ್ಯ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಮೆಚೂರು ದೇಹದಾಢ್ರ್ಯ ಸ್ಪರ್ಧೆಯಲ್ಲಿ ವಿಟ್ಲದ ಫಿಟ್‍ನೆಸ್ ಮಲ್ಟಿ ಜಿಮ್‍ನ ವಿದ್ಯಾರ್ಥಿ ಜೀವನ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ನಾಲ್ಕು ವಿಭಾಗದಲ್ಲಿ ಈ ಸ್ಪರ್ಧೆ ನಡೆದಿದ್ದು ಮೀಡಿಯಂ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ. ಇವರು ವಿಟ್ಲದ ಫಿಟ್‍ನೆಸ್ ಮಲ್ಟಿ ಜಿಮ್‍ನಲ್ಲಿ ಸುನೀಲ್ ಪಾಯಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ಇವರು ಸಂಕಪ್ಪ ಗೌಡ ಮತ್ತು ಲಕ್ಷ್ಮಿ ಇವರ ಪುತ್ರ

ಜಾಹೀರಾತು

ಜಾಹೀರಾತು
ಜಾಹೀರಾತು