Friday, November 29, 2024
ಸುದ್ದಿ

ಉಪ್ಪಿನಂಗಡಿಯ ಕರ್ಮಭೂಮಿ ಕೇದಾರದಲ್ಲಿ ಇಂದು ” ಈಶ್ವರಾರ್ಪಣಮ್ ” ; ಭಾವಜೀವಿ, ನುಡಿದಂತೆ ನಡೆದ ಸಾಹುಕಾರ, ಕಲಾಮಾತೆಯ ಆರಾಧಕ ದಿ. ಕಜೆ ಈಶ್ವರ ಭಟ್ಟರಿಗೆ ಭಾವ – ನುಡಿ – ಕಲಾ ನಮನ – ಕಹಳೆ ನ್ಯೂಸ್

ಉಪ್ಪಿನಂಗಡಿ : ವಯೋಸಹಜ ಅನಾರೋಗ್ಯದಿಂದ ಇಹಲೋಕದ ಯಾತ್ರೆಯನ್ನು ಮುಗಿಸಿ, ಬದುಕನ್ನು ‌ಬದುಕಲು ಕಲಿಯಿರಿ ಎಂಬಂತೆ ಬದುಕಿ, ಜೀವನವನ್ನು ಸಾರ್ಥಕಗೊಳಿಸಿ‌ ನೆನಪುಗಳ ಇತಿಹಾಸದ ಪುಟದಲ್ಲಿ ಅವಿಸ್ಮರಣೀಯ ಮೈಲಿಗಲ್ಲಾದ ದಿ. ಕಜೆ ಈಶ್ವರ ಭಟ್ಟರಿಗೆ ಅವರ ಕರ್ಮಭೂಮಿ, ತಪೋಭೂಮಿ‌ ಉಪ್ಪಿನಂಗಡಿಯ ಕೇದಾರದಲ್ಲಿ ಅರ್ಥಪೂರ್ಣ ಶೃದ್ದಾಂಜಲಿ ಕಾರ್ಯಕ್ರಮ ಇಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾವನಮನ – ನುಡಿನಮನ – ಕಲಾನಮನ ಎಂಬ ಅರ್ಥಪೂರ್ಣ ಕಾರ್ಯಕ್ರಮ ” ಈಶ್ವರಾರ್ಪಣಮ್ ” ಎಂದ ಹೆಸರಿನಲ್ಲಿ ನಡೆಯಲಿದ್ದು, ಮಧ್ಯಾಹ್ನ 2.00 ರಿಂದ 3.30ರ ವರೆಗೆ ಅವರ ಒಡನಾಟದ ನೆನಪಿನಂಗಳದಿಂದ ಒಡಲಾಳದ ಸವಿಮುತ್ತುಗಳನ್ನು ಆಯ್ದ ಬಳಗಬಂಧು : ಡಾ ತಾಳ್ತಜೆ ವಸಂತಕುಮಾರ, ಯಕ್ಷಬಂಧು : ಉಜಿರೆ ಅಶೋಕ ಭಟ್ಟ, ಸಾಹಿತ್ಯಬಂಧು : ಡಾ.ವರದರಾಜ ಚಂದ್ರಗಿರಿ , ಸಹಕಾರಿ ಬಂಧು : ಕೊಂಕೋಡಿ ಪದ್ಮನಾಭ, ಸಂಘಟಕ ಬಂಧು : ಡಾ. ಗಿರಿಧರ ಕಜೆ ಪ್ರಸ್ತುತಿಯನ್ನು ಮಾಡಲಿದ್ದರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ಮೂಡಂಬೈಲು, ಜೋಶಿ, ಉಜಿರೆ, ಸಾಲೆಬೈಲು ಆಡ್ಯರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಶ್ರೀರಾಮ ಪರಂಧಾಮ ನಡೆಯಲಿದೆ.