Thursday, January 23, 2025
ಸುದ್ದಿ

ವಿಶ್ವಹಿಂದೂ ಪರಿಷತ್ ಹಾಗು ಭಜರಂಗದಳ ಕಡಬ ಪ್ರಖಂಡ ವತಿಯಿಂದ ನಮ್ಮ ನಡೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ನೆಡೆ ಎಂಬ ವಿನೂತನ ಪಾದಯಾತ್ರೆ-ಕಹಳೆ ನ್ಯೂಸ್

ಕಡಬ; ಕಡಬದಿಂದ ಪ್ರಥಮ ಬಾರಿಗೆ 01/12/2019 ರಂದು ಬೆಳಿಗ್ಗೆ 05 ಗಂಟೆಯಿಂದ ಶ್ರೀ ದುರ್ಗಾಅಂಬಿಕಾ ಅಮ್ಮನವರ ದೇವಸ್ಥಾನದಿಂದ ಹೊರಟು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವರೆಗೆ ಪಾದಯಾತ್ರೆ ನಡೆಯಲಿದೆ.

ಧರ್ಮ ಜಾಗ್ರತಿ ಹಾಗು ಗೋಸಂರಕ್ಷಣೆ, ಗೋವುವನ್ನು ರಾಷ್ಟೀಯ ಪ್ರಾಣಿ ಎಂಬ ಸಂದೇಶ ನೀಡುವ ಸಲುವಾಗಿ, ಅಕ್ರಮ ಕಸಾಯಿಖಾನೆಗಳನ್ನು ಮಟ್ಟಹಾಕಲು ಆಗ್ರಹಿಸಿ ಪಾದಯಾತ್ರೆ ನಡೆಯಲಿದೆ. ಇನ್ನೂ ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ಹಾಗು ಬಿಳಿನೆಲೆಯಲ್ಲಿ ಧರ್ಮ ಜಾಗೃತಿ ಸಭೆ ನಡೆಯಲಿದ್ದು, ದಶಂಬರ 29 ರಂದು ಈಶ್ವರಮಂಗಿಲದಲ್ಲಿ ಜರಗುವ ಭಜನಾ ಮಹಾ ಮಂಡಳ 2019ರ ಪೂರ್ವಭಾವಿಯಾಗಿ ಭಜನೆ ಪಾದಯಾತ್ರೆಯೊಂದಿಗೆ ನಡೆಯಲಿದೆ. ಕುಕ್ಕೇ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲು ಭಜನಾ ಕಾರ್ಯಕ್ರಮ ಹಾಗು ಧರ್ಮ ಜಾಗ್ರತಿ ಸಭೆ ನಡೆಯಲಿದ್ದು, ಬಾಲಕೃಷ್ಣ ರೈ ಉದ್ಯಮಿ ಶ್ರೀದೇವಿ ನ್ಯೂಸ್ ಸೆಂಟರ್ ಅವರು ಕಡಬದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ,
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಗೌರವಾಧ್ಯಕ್ಷರಾದ ಜನಾರ್ದನ ರಾವ್, ವಿಶ್ವಹಿಂದೂ ಪರಿಷತ್ ಅಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ, ತಾಲೂಕು ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಮೂಲಚಂದ್ರ ಕಾಂಚನ ಭಜರಂಗದಳ ಹಾಗು ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇನ್ನೂ ಸರ್ವರಿಗೂ ಸ್ವಾಗತ ಬಯಸುವ ವಿಶ್ವಹಿಂದೂಪರಿಷತ್ ಹಾಗು ಭಜರಂಗದಳ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು