ಮಂಗಗಳಿಂದ ಬೆಳೆ ರಕ್ಷಿಸಲು ಈ ರೈತ ಮಾಡಿದ್ದಾರೆ ಒಳ್ಳೆ ಉಪಾಯ
ಮಂಗಗಳಿಂದ ಬೆಳೆ ಹಾನಿ ತಪ್ಪಿಸಲು ಕರ್ನಾಟಕದ ಕೃಷಿಕರೊಬ್ಬರು ತಮ್ಮ ನಾಯಿಗೆ ಹುಲಿ ಮಾದರಿಯಲ್ಲಿ ಬಣ್ಣ ಬಳಿದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಶ್ರೀಕಾಂತ ಗೌಡ ಎಂಬುವವರೇ ನಾಯಿಯ ದೇಹಕ್ಕೆ ಹುಲಿ ಪಟ್ಟೆ ಚಿತ್ರಿಸಿದವರು.
4 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬಳಿ ರೈತರು ಹುಲಿ ಗೊಂಬೆಗಳನ್ನು ಬಳಸುವುದನ್ನು ಕಂಡಿದ್ದ ಇವರು, ತಮ್ಮ ಹೊಲದಲ್ಲಿ ಹುಲಿ ಗೊಂಬೆ ಇಟ್ಟಿದ್ದರು. ಆಶ್ಚರ್ಯವೆಂಬಂತೆ ಗೊಂಬೆಗೆ ಹೆದರಿದ ಮಂಗಗಳು ಹೊಲಕ್ಕೆ ದಾಳಿ ಮಾಡುವುದನ್ನು ನಿಲ್ಲಿಸಿದ್ದವು.
ಎರಡು ದಿನಗಳ ನಂತರ ಮತ್ತೊಂದು ಕಡೆ ಇದೇ ರೀತಿ ಗೊಂಬೆ ಇಟ್ಟಾಗ ಅಲ್ಲೂ ಮಂಗಗಳ ಹಾವಳಿ ನಿಂತಿತು. ಆಗ ಶ್ರೀಕಾಂತ ಗೌಡ ತಮ್ಮ ನಾಯಿಯನ್ನೇ ಹುಲಿಯಂತೆ ಚಿತ್ರಿಸಿ, ಮಂಗಗಳ ಕಾಟದಿಂದ ಮುಕ್ತಿ ಪಡೆದಿದ್ದಾರೆ.