Friday, January 24, 2025
ಸುದ್ದಿ

ಸ್ವಿಚ್ ಆಫ್ ಆಯ್ತು ಮದುಮಗನ ಮೊಬೈಲ್, ರದ್ದಾಯ್ತು ನಡೆಯಬೇಕಿದ್ದ ಮದುವೆ-ಕಹಳೆ ನ್ಯೂಸ್

ಸ್ವಿಚ್ ಆಫ್ ಆಯ್ತು ಮದುಮಗನ ಮೊಬೈಲ್, ರದ್ದಾಯ್ತು ನಡೆಯಬೇಕಿದ್ದ ಮದುವೆ

ಮದುಮಗ ನಾಪತ್ತೆಯಾಗಿದ್ದರಿಂದ ನಡೆಯಬೇಕಿದ್ದ ಮದುವೆ ರದ್ದಾಗಿದೆ. ಕುಂದಾಪುರ ಬೈಂದೂರಿನ ಯಾಡ್ತರೆಯಲ್ಲಿ ಶುಕ್ರವಾರ ಮದುವೆ ನಡೆಯಬೇಕಿತ್ತು.

ಪ್ರವೀಣ್ ಕುಮಾರ್ ನಾಪತ್ತೆಯಾದ ಮದುಮಗ ಎಂದು ಹೇಳಲಾಗಿದೆ. ಶುಕ್ರವಾರ ಪ್ರವೀಣ್ ಕುಮಾರ್ ಮದುವೆ ನಿಗದಿಯಾಗಿತ್ತು. 10 ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಕುಮಾರ್ ನವಂಬರ್ 26 ರಂದು ಊರಿಗೆ ಬರುವುದಾಗಿ ತಿಳಿಸಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಆತ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಇದರಿಂದಾಗಿ ಕಂಗಾಲಾದ ಆತನ ತಂದೆ ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. 4 ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಶುಕ್ರವಾರ ಮದುವೆ ನಡೆಯಬೇಕಿತ್ತು. ಆದರೆ ವರ ನಾಪತ್ತೆಯಾಗಿದ್ದರಿಂದ ಮದುವೆ ರದ್ದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಬೆಂಗಳೂರಿನಲ್ಲೇ ಪ್ರವೀಣ್ ಕುಮಾರ್ ಇರುವುದಾಗಿ ಮಾಹಿತಿ ಸಿಕ್ಕಿದೆ. ಆತ ಈ ಮೊದಲೇ ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ. ವಧುವಿನ ಕಡೆಯವರು ಮದುವೆಗೆ ಮಾಡಿದ್ದ ಖರ್ಚು ಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ.