Friday, January 24, 2025
ಸುದ್ದಿ

ರುಚಿ ಸೋಯಾ ಖರೀದಿಗೆ 3200 ಕೋಟಿ‌ ರೂ. ಬ್ಯಾಂಕ್ ಸಾಲ ಪಡೆದ ಬಾಬಾ ರಾಮ್‌ ದೇವ್‌ ಕಂಪನಿ – ಕಹಳೆ ನ್ಯೂಸ್

ರುಚಿ ಸೋಯಾ ಖರೀದಿಗೆ 3200 ಕೋಟಿ‌ ರೂ. ಬ್ಯಾಂಕ್ ಸಾಲ ಪಡೆದ ಬಾಬಾ ರಾಮ್‌ ದೇವ್‌ ಕಂಪನಿ

ಯೋಗ ಗುರು ಬಾಬಾ ರಾಮ್‌ ದೇವ್ ಸಾರಥ್ಯದ ಪತಂಜಲಿ ಇದೀಗ ರುಚಿ ಸೋಯಾ ಖರೀದಿಸಲಿದ್ದು ಇದಕ್ಕಾಗಿ 3200 ಕೋಟಿ ರೂಪಾಯಿ ಸಾಲಕ್ಕೆ ಮಂಜೂರಾತಿ ಪಡೆದಿದೆ.

2017ರಲ್ಲಿಯೇ ಈ ಸಂಬಂಧಿತ ಪ್ರಕ್ರಿಯೆ ನಡೆದಿದೆ. ಶುಕ್ರವಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಪತಂಜಲಿ, ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 1200 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 700 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 600 ಕೋಟಿ, ಸಿಂಡಿಕೇಟ್ ಬ್ಯಾಂಕ್ ನಿಂದ 400 ಮತ್ತು ಅಲಹಾಬಾದ್ ಬ್ಯಾಂಕ್ ನಿಂದ 300 ಕೋಟಿ ರೂಪಾಯಿ ಸಾಲಕ್ಕೆ ಮಂಜೂರಾತಿ ಸಿಕ್ಕಿದೆ ಎಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವೇ ವರ್ಷಗಳಲ್ಲಿ ದೇಶದ ಪ್ರಮುಖ ಉದ್ಯಮವಾಗಿ ಬೆಳೆಯುತ್ತಿರುವ ಪತಂಜಲಿ, ರುಚಿ ಸೋಯಾ ಖರೀದಿಸುವ ಮೂಲಕ ಮತ್ತಷ್ಟು ಬೃಹತ್ ಉದ್ದಿಮೆ ಎನಿಸಲಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿ ಮೂಲಕ ಖರೀದಿ ಸಂಬಂಧಿಸಿದಂತೆ ಎಲ್ಲ ಸಮ್ಮತಿ ಪಡೆದಿರುವ ಪತಂಜಲಿ 204 ಕೋಟಿ ರೂಪಾಯಿ ಇಕ್ವಿಟಿ ಜತೆ 3236 ಕೋಟಿಗೆ ರುಚಿ ಸೋಯಾ ಮಾಲೀಕತ್ವ ಹೊಂದಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು