ಇಲ್ಲಿನ ಶಿಕ್ಷಣದ ಗುಣಮಟ್ಟ ನೋಡಿ ನಮ್ಮ ದೇಶದ ಬಗ್ಗೆ ಹೊಸಭರವಸೆ ಮೂಡಿದೆ ; ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ ಸಾಹಿತಿ ಡಾ ಚಂದ್ರಶೇಖರ ಕಂಬಾರ ಅಭಿಮತ – ಕಹಳೆ ನ್ಯೂಸ್
ಕಲ್ಲಡ್ಕ : ಪ್ರಪಂಚವಿಡೀ ಸುತ್ತಿದ್ದರೂ, ಇಡೀ ಪ್ರಪಂಚಕ್ಕೆ ಕತೆಯನ್ನು ತಿಳಿಸಿದವರು ಭಾರತೀಯರು. ನಾವು ಕತೆಪುಸ್ತಕವನ್ನು ಓದುವುದು, ಪ್ರಪಂಚಕ್ಕೆ ಕತೆ ಹೇಳುವುದನ್ನು ಕಲಿಸಿದವರು. 1600 ಭಾಷೆಗಳು, 6400 ಜಾತಿ, 34 ಕೋಟಿ ದೇವತೆಗಳು ಎಲ್ಲವೂ ಇದ್ದರೂ ಹತ್ತು ಸಾವಿರ ವರ್ಷಗಳ ಹಿಂದಿನ ಐತಿಹ್ಯವನ್ನು ಹೊಂದಿದೆ.
ದುರ್ದೈವ ಎಂದರೆ ಭಾರತೀಯ ಸಂಸ್ಕ್ರತಿಯನ್ನು ಆಂಗ್ಲ ಮಾಧ್ಯಮ ಶಿಕ್ಷಣವು ನಾಶಗೊಳಿಸುತ್ತಿದೆ. ಇಂತಹ ಕನ್ನಡ ಮಾಧ್ಯಮ ಶಾಲೆಯನ್ನು ಇದೇ ಮೊದಲು ನೋಡಿರುತ್ತೇನೆ. ನಾವು ಕತೆ ಮೂಲಕ ಶಿಕ್ಷಣವನ್ನು ನೀಡುತ್ತೇವೆ. ಇಂಗ್ಲೀಷ್ ಭಾಷೆಯಲ್ಲಿ ಕತೆಯನ್ನು 20ಸಲ ವಿವರಿಸಿದರೂ ಮಕ್ಕಳ ಮನಸ್ಸಿಗೆ ನಾಟುವುದಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಒಂದು ಬಾರಿ ಹೇಳಿದರೆ ಸಾಕು, ಅವರು ಅದನ್ನು ನಮಗೆ ಆ ಮೇಲೆ ಸರಿಯಾಗಿ ಕತೆ ಹೇಳುತ್ತಾರೆ. ಪ್ರಯೋಗದ ಮೂಲಕ ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ಕಾಣುವಂತಹ ಶಿಕ್ಷಣ ಬೇಕು. ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ ಆಗಬೇಕು. ಸಂಸ್ಕ್ರತದಲ್ಲಿ ಈ ವ್ಯಕ್ತಿತ್ವ ಮತ್ತು ಸಂಸ್ಕಾರಗಳ ವಿಕಸನವಾಗುತ್ತದೆ. ಈ ಶಾಲೆಯ ವಿದ್ಯಾರ್ಥಿಗಳ ಚಟುವಟಿಕೆ ಮತ್ತು ಪ್ರತಿಭೆಗಳನ್ನು ನೋಡಿ ಸಂತೋಷವಾಗಿದೆ. ಸಾ”ತ್ಯದ ಬಗ್ಗೆ ಆಸಕ್ತಿ ಬೇಕು. ಸಾ”ತ್ಯದ ಸಾಮರ್ಥ್ಯಗಳು ಎಲ್ಲರಲ್ಲೂ ಇರುತ್ತದೆ.
ಅದನ್ನು ಬಡಿದೆಬ್ಬಿಸಬೇಕು. ನಮ್ಮ ಅಹಂಕಾರಗಳು ಹೋಗಬೇಕು. ಅಹಂಕಾರ ನಮ್ಮಿಂದ ದೂರವಾದಾಗ ನಾವು ನಿಜವಾದ ಮನುಷ್ಯರಾಗುತ್ತೇವೆ. ಮನುಷ್ಯತ್ವವನ್ನು ಬೆಳೆಸಿಕೊಂಡು ಇತರರ ಸುಖ ದುಃಖಗಳಲ್ಲಿ ಪಾಲುದಾರರಾಗಬೇಕು. ಅಜ್ಞಾನದಿಂದ ಪಾಪ ಹುಟ್ಟಿದರೆ, ಜ್ಞಾನದಿಂದ ಪುಣ್ಯ ಲಭಿಸುತ್ತದೆ. ಆದುದರಿಂದ ಪಾಪಕರ್ಮಗಳಿಂದ ದೂರವಿರಬೇಕು. ನಮ್ಮ ದೇಶವು ಉತ್ಕ್ರಷ್ಟವಾದ ಸಂಸ್ಕ್ರತಿಯನ್ನು ಹೊಂದಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭ್ಯುದಯಕ್ಕೆ ದಾರಿದೀಪವಾಗೋಣ ಎಂದು ಕವಿ, ಸಾಹಿತಿ, ನಾಟಕಕಾರರಾದ ಡಾ ಚಂದ್ರಶೇಖರ ಕಂಬಾರರು ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಈ ಸಂಧರ್ಭದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.