Sunday, November 24, 2024
ಸುದ್ದಿ

ಸಿಯೋಕ್​​ ಜಲಪಾತ ಬಳಿ ಚಳಿಗಾಲದ ಚಂಡಮಾರುತಕ್ಕೆ ಸಿಲುಕಿ ಪ್ರಯಾಣಿಕರ ವಿಮಾನ ಪತನ: 9 ಮಂದಿ ಸಾವು – ಕಹಳೆ ನ್ಯೂಸ್

ಸಿಯೋಕ್​​ ಜಲಪಾತ ಬಳಿ ಚಳಿಗಾಲದ ಚಂಡಮಾರುತಕ್ಕೆ ಸಿಲುಕಿ ಪ್ರಯಾಣಿಕರ ವಿಮಾನ ಪತನ: 9 ಮಂದಿ ಸಾವು

ದಕ್ಷಿಣ ಡಕೋಟಾ (ಅಮೆರಿಕಾ): ಚಳಿಗಾಲದ ಚಂಡಮಾರುತಕ್ಕೆ ಸಿಲುಕಿದ ವಿಮಾನ ಪತನಗೊಂಡು 9 ಮಂದಿ ಪ್ರಯಾಣಿಕರು ಮೃತಪಟ್ಟು 3 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ವಿಮಾನ ಚೇಂಬರ್ಲೇನ್‌ನಿಂದ ಇಡಾಹೊ ಜಲಪಾತಕ್ಕೆ ಹೊರಟಿತ್ತು. ವಿಮಾನದಲ್ಲಿ 12 ಮಂದಿ ಪ್ರಯಾಣಿಕರು ಇದ್ದರು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಧಿಕಾರಿ ಪೀಟರ್ ನುಡ್ಸನ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೇಂಬರ್ಲೇನ್‌ ಹಾಗೂ ದಕ್ಷಿಣ ಡಕೋಟಾದಲ್ಲಿ ಚಳಿಗಾಲದ ಚಂಡಮಾರುತ ಆರಂಭವಾಗಿದ್ದು ಇದರಿಂದ ವಿಮಾನ ಪತವಾಗಿದೆ ಎಂದು ತಿಳಿದು ಬಂದಿದೆ. ಚಳಿಗಾಲದ ಚಂಡಮಾರುತ ಎದ್ದಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ವಾಯು ಮಾರ್ಗದಲ್ಲಿ ವಿಮಾನ ಸಂಚಾರ ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಮಾನ ಶನಿವಾರ ಮಧ್ಯಾಹ್ನ 12.30ಕ್ಕೆ ಚೇಂಬರ್ಲೇನ್‌ನಿಂದ ಹೊರಟಿತು. ವಿಮಾನ ನಿಲ್ದಾಣದಿಂದ 225.3 ಕಿ.ಮೀ. ದೂರ ತೆರಳಿದ ನಂತರ ಸಿಯೋಕ್​​ ಜಲಪಾತ ಬಳಿ ಚಂಡಮಾರುತದ ಹೊಡೆತಕ್ಕೆ ಸಿಲುಕಿತು. ವಿಮಾನ ಅಪಘಾತವನ್ನು ಎನ್‌ಟಿಎಸ್‌ಬಿ ತನಿಖೆ ನಡೆಸಲಿದೆ. (ಏಜೆನ್ಸೀಸ್​)