ಕಲಬುರಗಿ : ಸರ್ಕಾರದ ದುರಾಡಳಿತವನ್ನು ಮುಚ್ಚಿಕೊಳ್ಳಲು ಸಿಎಂ ಸಿದ್ದರಾಮಯ್ಯನವರು ಜನರ ಗಮನವನ್ನು ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಾಳೆ ಹೊನ್ನುರಿನ ರಂಭಾಪುರಿ ಶ್ರೀಗಳು ಕಿಡಿಕಾರಿದ್ದಾರೆ.
ನಗರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯನವರು ಹಿಂದು ಧಾರ್ಮಿಕ ಕೇಂದ್ರಗಳ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ಜನಕ್ರೋಶವನ್ನು ಶಮನ ಮಾಡಲು ಭಾವನಾತ್ಮಕ ವ್ಯೂಹ ರಚಿಸುತ್ತಿದ್ದಾರೆ.
ಹಿಂದೂ ಮಠ, ದೇವಾಲಯಗಳನ್ನು ಸರ್ಕಾರ ಸುಪರ್ದಿ ತೆಗೆದುಕೊಳ್ಳುವ ಕ್ರಮ ಸರಿಯಲ್ಲ ಎಂದು ಟೀಕಿಸಿದರುಹಿಂದೂ ಮಠ, ಮಂದಿರಳ ಮೇಲೆ ಏಕೆ ಸರ್ಕಾರದ ಕಣ್ಣಿದೆ. ಅನ್ಯ ಧರ್ಮೀಯ ಕೇಂದ್ರಗಳ ಮೇಲೂ ತಮ್ಮ ಅಧಿಕಾರವನ್ನು ಬಳಸಲಿ ಎಂದಿದ್ದಾರೆ.
ವರದಿ : ಕಹಳೆ ನ್ಯೂಸ್