Sunday, November 24, 2024
ಸುದ್ದಿ

ಶಾಕಿಂಗ್ : ಹೆಣ್ಣು ಮಗುವೆಂದು 8 ದಿನಗಳ ಹಸುಗೂಸನ್ನು ಕೊಂದ ಅಜ್ಜಿ – ಕಹಳೆ ನ್ಯೂಸ್

ಶಾಕಿಂಗ್ : ಹೆಣ್ಣು ಮಗುವೆಂದು 8 ದಿನಗಳ ಹಸುಗೂಸನ್ನು ಕೊಂದ ಅಜ್ಜಿ!

ಬೆಂಗಳೂರು : ಹೆಣ್ಣು ಮಗು ಎಂದು ತಾತ್ಸಾ ಮಾಡಿ 8 ದಿನಗಳ ಹಸುಗೂಸನ್ನು ಸ್ವಂತ ಅಜ್ಜಿಯೇ ಮಹಡಿಯಿಂದ ಎಸೆದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಮಿಳುನಾಡಿನ ತಿರುಚ್ಚಿ ಮೂಲದ ಪರಮೇಶ್ವರಿ (60) ಹಸುಗೂಸನ್ನು ಕೊಂದ ಅಜ್ಜಿ. ಸದ್ಯ ಸೋಲದೇವಹನಳ್ಳಿ ಠಾಣೆ ಪೊಲೀಸರು ಪರಮೇಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಷಲ್ ಮತ್ತು ತಮಿಳುಸೆಲ್ವಿ ದಂಪತಿ ಹಾಲಿನ ಬೂತ್ ನಡೆಸುತ್ತಿದ್ದಾರೆ. 8 ದಿನಗಳ ಕಾಲ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ತಮಿಳುಸೆಲ್ವಿಗೆ ಹೆಣ್ಣು ಮಗು ಜನಿಸಿತ್ತು. ಮಗು ಅವಧಿಪೂರ್ವವಾಗಿ ಜನಿಸಿತ್ತು. ಶನಿವಾರ ರಾತ್ರಿ ಕೆಲಸ ಮೇಲೆ ಮಾರ್ಷಲ್ ಮನೆಯಿಂದ ಹೊರ ಹೋಗಿದ್ದರು. ತಮಿಳುಸೆಲ್ವಿ ಬಾತ್ ರೂಮ್ ಗೆ ತೆರಳಿದ್ದ ವೇಳೆ ಮಗುವನ್ನು ನೋಡಿಕೊಳ್ಳುತ್ತಿದ್ದ ಮಾರ್ಷಲ್ ತಾಯಿ ಪರಮೇಶ್ವರಿ ಮಗುವನ್ನು ಮಹಡಿಯಿಂದ ಹಿಂಭಾಗದ ಖಾಲಿ ಜಾಗಕ್ಕೆ ಎಸೆದು ಕೊಲೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು