ಮಕ್ಕಳಿಬ್ಬರನ್ನು ಸಾಯಿಸಿ ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಂಪತಿ
ನವದೆಹಲಿ: ಮಕ್ಕಳಿಬ್ಬರನ್ನು ಸಾಯಿಸಿ ದಂಪತಿ ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಾಜಿಯಾಬಾದ್ನ ಇಂದಿರಾಪುರಂ ಎನ್ನುವ ಪ್ರದೇಶದಲ್ಲಿ ನಡೆದಿದೆ.
ದಂಪತಿಗಳು ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಆತ್ಮಹತ್ಯೆಗೂ ಮುನ್ನ ದಂಪತಿ ಮಕ್ಕಳಿಬ್ಬರನ್ನು ಮಲಗಿದ್ದ ವೇಳೆಯೇ ಸಾಯಿಸಿದ್ದರು ಎಂದು ತಿಳಿದು ಬಂದಿದೆ.
ದಂಪತಿ ಆತ್ಮಹತ್ಯೆಯ ವೇಳೆ ಇನ್ನೋರ್ವ ಮಹಿಳೆ ಸಹ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಈ ಕುಟುಂಬದ ಸಾಮೂಹಿಕ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.