Wednesday, November 27, 2024
ಸುದ್ದಿ

ಪುತ್ತೂರು ತಾಲೂಕಿನ ಬೆಳ್ಳಿಪಾಡಿಯ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ-ಕಹಳೆ ನ್ಯೂಸ್

ಹಿಂದೂ ಜನಜಾಗೃತಿ ಸಮಿತಿ ಸಮಿತಿ ವತಿಯಿಂದ ಪುತ್ತೂರು ತಾಲೂಕಿನ ಬೆಳ್ಳಿಪಾಡಿಯ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಯಿತು. ಇನ್ನೂ ಶಂಖನಾದ ಮಾಡುವ ಮೂಲಕ ಕಾರ್ಯಕ್ರಮಕ್ಕೆ ದಯಾನಂದ ಹೆಗ್ಡೆ ಚಾಲನೆ ನೀಡಿದರು. ಧರ್ಮಪ್ರೇಮಿಗಳಾದ ಮನೋಹರ ಡಿ.ವಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಹಿಂದೂ ಜನಜಾಗೃತಿ ಸಮಿತಿಯ ಆನಂದ ಗೌಡ ಇವರು ಮಾತನಾಡಿ “ಹಿಂದೂ ಬಹುಸಂಖ್ಯಾತ ರಾಷ್ಟ್ರ ಭಾರತ ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಸೇನೆಯಲ್ಲಿ ಸಂಖ್ಯಾಬಲ ಕಡಿಮೆ ಇದ್ದರೂ ಬಲಿಷ್ಠ ಸಂಖ್ಯೆಯಲ್ಲಿನ ಮೊಘಲರನ್ನ ಸೈನ್ಯವನ್ನ ಹಿಮ್ಮೆಟ್ಟಿಸಿದರು. ಆದುದರಿಂದ ಸಂಖ್ಯಾಬಲಕ್ಕಿಂದ ಆತ್ಮಬಲ ಮಹತ್ವದದ್ದು ಇದೆ. ಧರ್ಮಾಚರಣೆಯಿಂದ ಆತ್ಮಬಲ ವೃಧ್ಧಿಸುತ್ತದೆ. ಶಿವಾಜಿ ಮಹಾರಾಜರಿಗೆ ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಿಂದುವೀ ಸ್ವರಾಜ್ಯವನ್ನು ಸ್ಥಾಪಿಸಲು ಸಾಧ್ಯವಾಯಿತು. ಹಾಗೆಯೇ ಭಾರತ ಅನಾದಿಕಾಲದಿಂದಲೂ ವಿಶ್ವಗುರುವಾಗಿತ್ತು. ಆದರೆ ಅನೇಕ ವಿದೇಶಿ ಆಕ್ರಮಣಕಾರರಿಂದ ಹಿಂದೂ ಸಂಸ್ಕøತಿಯ ಮೇಲೆ ಆಘಾತವಾಯಿತು. ಬ್ರಿಟೀಷರ ಕಾಲದಲ್ಲಿ 562 ರಾಜರ ಸಂಸ್ಥಾನಗಳು ಅಸ್ತಿತ್ವದಲ್ಲಿ ಇತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಹಿಂದೂ ಧರ್ಮವನ್ನು ಉಳಿಸಲು ಸರದಾರ ವಲ್ಲಭಭಾಯಿ ಪಟೇಲ್ ಇವರು ಹಿಂದೂಗಳನ್ನು ಒಗ್ಗೂಡಿಸಿದರು. ಅನಾದಿಕಾಲದಿಂದಲೂ 1,20,000 ಗುರುಕುಲ ಇತ್ತು. ಮೆಕಾಲೆಯು ತಮ್ಮ ಅಧಿಕಾರ ಸ್ಥಾಪಿಸಲು ಬ್ರಿಟಿμï ರಾಣಿ ಆಜ್ಞೆಯಂತೆ ಗುರುಕುಲವನ್ನು ಷಡ್ಯಂತ್ರಮಾಡಿ ನಿಲ್ಲಿಸಿದರು. ಇದರಿಂದ ಹಿಂದೂಗಳು ಧರ್ಮಶಿಕ್ಷಣದಿಂದ ವಂಚಿತರಾದರು. ಹಿಂದೂಗಳಿಗೆ ಧಾರ್ಮಿಕ ಶಿಕ್ಷಣದ ಬಗ್ಗೆ ವಿಚಾರ ಸಿಗದೇ ಇಂದು ಹಿಂದೂ ಧರ್ಮೀಯರು ಮತಾಂತರವಾಗುತ್ತಿರುವುದು ಹಿಂದೂ ಧರ್ಮದ ದಯನೀಯ ಸ್ಥಿತಿಯಾಗಿದೆ. ಹಾಗಾಗಿ ಧರ್ಮಶಿಕ್ಷಣ ವರ್ಗ ಗಳನ್ನು ಪ್ರಾರಂಭಿಸಬೇಕು ಎಂದು ವಿಚಾರ ಮಂಡಿಸಿದರು.
ಧರ್ಮಪ್ರೇಮಿಗಳಾದ ಮನೋಹರ ಡಿ.ವಿ ಇವರು ಮಾತನಾಡಿ “ಆಧ್ಯಾತ್ಮಿಕ ಸಾಧನೆಬಲ ಇರುವ ಜೀವಿಗಳಿಂದ ರಾಷ್ಟ್ರ ಮತ್ತು ಧರ್ಮರಕ್ಷಣೆಯ ಕಾರ್ಯದಲ್ಲಿ ಸಹಭಾಗಿಯಾಗುತ್ತಾರೆ. ಸ್ವಯಂಭೂ ಹಿಂದೂ ರಾಷ್ಟ್ರವಾದ

ಜಾಹೀರಾತು

ಜಾಹೀರಾತು
ಜಾಹೀರಾತು