Tuesday, January 21, 2025
ಸುದ್ದಿ

ಡಿ.8 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಾಯದಲ್ಲಿ ಬೃಹತ್ ಉಚಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಬಿರ-ಕಹಳೆ ನ್ಯೂಸ್

ದಿನಾಂಕ 8-12-2019ರ ಭಾನುವಾರದಂದು ಸಮಯ ಸರಿಯಾಗಿ ಬೆಳಿಗ್ಗೆ 9.30ರಿಂದ ಮದ್ಯಾಹ್ನ 1.30ರ ತನಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಾಯ ಇಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಕರಾಯ, ಗ್ರಾಮ ಪಂಚಾಯತ್ ತಣ್ಣೀರುಪಂತ, ಹಾಲು ಉತ್ಪಾದಕರ ಸಹಕಾರಿ ಸಂಘ ಕಲ್ಲೇರಿ, ಕೋಟಿ ಚೆನ್ನಯ ಫ್ರೆಂಡ್ಸ್ ಕ್ಲಬ್ ಮರಿಪಾದ್ದೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ. ಶಾಲೆ ಕರಾಯ ಹಾಗೂ ಯೆನಪೋಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ದಂತ ಆರೋಗ್ಯ ವಿಭಾಗ ಯೆನಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇವರ ಸಹಕಾರದೊಂದಿಗೆ ಬೃಹತ್ ಉಚಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಬಿರ ನಡೆಯಲಿದೆ. ಇನ್ನು ಕಾರ್ಯಕ್ರಮದ ಉದ್ಘಾಟನೆಯನ್ನು ನಿರಂಜನ್ ಬಾವಂತಬೆಟ್ಟು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಆಶಿತ್ ಎಂ.ವಿ ವಹಿಲಿದ್ದು. ಇನ್ನು ಮುಖ್ಯ ಅತಿಥಿಗಳಾಗಿ ಡಾ| ರಾಜಾರಾಮ್‍ಕೆ.ಬಿ, ಜಯವಿಕ್ರಂ ಕಲ್ಲಾಪು, ಪೂರ್ಣಿಮಾ, ಜಗದೀಶ ಶೆಟ್ಟಿ ಮೈರ, ಜಯರಾಮ್ ಸಾಲಿಯಾನ್. ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶೇಶವಾಗಿ “ಮಹಿಳೆಯರ ಆರೋಗ್ಯ” ಸಂಬಂಧಿ ಅಂಶಗಳಾದ ವೈಯಕ್ತಿಕ ನೈರ್ಮಲ್ಯ, ಸ್ತನಪಾನ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಮುಟ್ಟಿನ ಸಮಸ್ಯೆ, ಸ್ತನ ಕ್ಯಾನ್ಸರ್, ಗರ್ಭ ಕೋಶ ಕ್ಯಾನ್ಸರ್ ಮುಂತಾದ ಕಾಯಿಲೆ ಬಗ್ಗೆ ಹಾಗೂ ತಂಬಾಕು ವಿರೋಧಿ ಅರಿವು ಜೊತೆಗೆ ಕ್ಯಾನ್ಸರ್ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಕುರಿತಂತೆ ನುರಿತ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿ.

ಜಾಹೀರಾತು

ಜಾಹೀರಾತು
ಜಾಹೀರಾತು