Tuesday, January 21, 2025
ಸುದ್ದಿ

ಕಾಸರಗೋಡು: ಮಹಿಳೆಯ ಸರದೋಚಲು ಯತ್ನಿಸಿ ಪರಾರಿದ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಕಾಸರಗೋಡು,ಡಿ 03 KAHALE News): ಬೈಕ್ ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಗರಿಸಲೆತ್ನಿಸಿ ಪರಾರಿಯಾದ ಯುವಕನನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಆದೂರು ಠಾಣಾ ವ್ಯಾಪ್ತಿಯಲ್ಲಿ ಬೋವಿಕ್ಕಾನ ಪರಿಸರದಲ್ಲಿ ಡಿ.೩ರಂದು ನಡೆದಿದೆ. ಬಂಧಿತನನ್ನು ನೆಲ್ಲಿಕಟ್ಟೆಯ ಬಷೀರ್ (40) ಎಂದು ಗುರುತಿಸಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಲಲಿತಾ ಎಂಬವರು ಧರಿಸಿದ್ದ ಚಿನ್ನದ ಸರವನ್ನು ಎಳೆದಿದ್ದು, ಮಹಿಳೆ ಗಾಬರಿಯಾಗಿ ಕಿರುಚಾಡಿದಾಗ ಈತ ಪರಾರಿಯಾಗಿದ್ದನು. ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗೂ ಈತನ ವಸ್ತ್ರದ ಗುರುತನ್ನು ಗುರುತಿಸಿದ ಮಹಿಳೆ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಸರಗಳ್ಳ ಬೈಕಿನೊಂದಿಗೆ ಕಾಸರಗೋಡು ಕಡೆ ತೆರಳಿದ್ದ. ನಾಗರಿಕರು ಕೆಲ ವಾಹನಗಳಲ್ಲಿ ಶೋಧ ನಡೆಸಿದ್ದು , ಹಲವರಿಗೆ ಮಾಹಿತಿ ನೀಡಲಾಯಿತು. ಈ ನಡುವೆ ಪಯರ್ ಪಳ್ಳ ಎಂಬಲ್ಲಿ ಆರೋಪಿಯನ್ನು ಬೈಕ್ ಸಹಿತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಕಳೆದ ಒಂದು ವಾರದಿಂದ ಈತ ಈ ಪರಿಸರದಲ್ಲಿ ಮೂರಕ್ಕೂ ಅಧಿಕ ಸರ ಕಳ್ಳತನ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.