Monday, January 20, 2025
ಸುದ್ದಿ

ಉಡುಪಿ: ಅಂತರಾಜ್ಯ ಕಳವು ಆರೋಪಿಗಳ ಬಂಧ-Kahale News / ಕಹಳೆ ನ್ಯೂಸ್

ಉಡುಪಿ ಡಿ 03 (KAHALE News): ಇಲ್ಲಿನ ತ್ರಿವೇಣಿ ಜಂಕ್ಷನ್ ಬಳಿಯ ಪ್ಲೇ ಜೋನ್ ಎಂಬ ಮೊಬೈಲ್ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ರಜಾಕ್ ಅಸ್ಲಾಂ ಮುಜಾವರ್(20), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಜಾ ಸಾಬ್ ನಾಯಕ್(25), ಬಿಹಾರ ರಾಜ್ಯದ ಶಿವಾನ್ ಜಿಲ್ಲೆಯ ದೀಪಕ್ ಪ್ರಸಾದ್(25) ಬಂಧಿತ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳು ನ.5ರಂದು ರಾತ್ರಿ ವೇಳೆ ಪ್ಲೇ ಜೋನ್ ಮೊಬೈಲ್ ಅಂಗಡಿಗೆ ನುಗ್ಗಿ 8,34,990ರೂ. ಮೌಲ್ಯದ ಮೊಬೈಲ್ ಫೋನ್‌ಗಳು ಹಾಗೂ ನಗದು ಕಳವುಗೈದಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರಿಂದ 3,00,000ರೂ. ಮೌಲ್ಯದ 16 ಮೊಬೈಲ್‌ಗಳು, 22,000 ರೂ. ನಗದು ಹಾಗೂ ಕಳವಿಗೆ ಬಳಸಿದ ಕಬ್ಬಿಣದ ಸ್ಕ್ರೂ ಡ್ರೈವರ್‌, ಒಂದು ಕಟ್ಟಿಂಗ್‌ ಪ್ಲೇರ್‌, ಬೆನ್ನಿಗೆ ಹಾಕುವ ಎರಡು ಬ್ಯಾಗ್‌, ಮೂಗಿಗೆ ಕಟ್ಟುವ ಒಂದು ಮಾಸ್ಕ್‌, ತಲೆಗೆ ಹಾಕುವ ಬಟ್ಟೆಯ ಕ್ಯಾಪ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.