Monday, January 20, 2025
ಸುದ್ದಿ

ಮಂಗಳೂರು: ಕಾಲೇಜಿಗೆ ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪತ್ತೆ-Kahale News / ಕಹಳೆ ನ್ಯೂಸ್

ಮಂಗಳೂರು, ಡಿ 03 (KAHALE NEWS): ಕಾಲೇಜು ವಾರ್ಷಿಕೋತ್ಸವಕ್ಕೆಂದು ಹೋದ ವಿದ್ಯಾರ್ಥಿನಿ ಮನೆಗೆ ಬಾರದೇ ಮನೆಗೆ ಬಾರದೇ ನಾಪತ್ತೆಯಾದ ಘಟನೆ ನ.30ರಂದು ನಡೆದಿದ್ದು ಇದೀಗ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ನಾಪತ್ತೆಯಾಗಿ ಪತ್ತೆಯಾದ ವಿದ್ಯಾರ್ಥಿನಿಯನ್ನು ಕುಲಶೇಖರ ಡೈರಿ ರಸ್ತೆಯ ನಿವಾಸಿ ಸಮಂತಾ ದಿಯಾ ಸೋನ್ಸ್ (15) ಎಂದು ಗುರುತಿಸಲಾಗಿದೆ. ಈಕೆ ನಗರದ ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಂತಾ ದಿಯಾಳನ್ನು ಯಾರೋ ಪುಸಲಾಯಿಸಿ ಕರೆದೊಯ್ದು ಅಪಹರಣ ಮಾಡಿರುವ ಸಾಧ್ಯತೆ ಇದೆ ಎಂದು ಆಕೆಯ ಪೋಷಕರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಂಜೆ 4 ಗಂಟೆಗೆ ಆಕೆ ವಾರ್ಷಿಕೋತ್ಸವಕ್ಕೆಂದು ಮನೆಯಿಂದ ಹೊರಟುಹೋಗಿದ್ದು, ರಾತ್ರಿ 7.15 ರವರೆಗೆ ಆಕೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಇದ್ದ ಬಗ್ಗೆ ಆಕೆಯ ಸಹಪಾಠಿ ಮನೆಮಂದಿಗೆ ತಿಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಇದೀಗ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು