Monday, January 20, 2025
ಸುದ್ದಿ

ಸುದರ್ಶನ್ ಮರ್ಡರ್- ಪುತ್ತೂರಿನ ಯುವಕ ಸೇರಿದಂತೆ ಮತ್ತಿಬ್ಬರು ಪೊಲೀಸರಿಗೆ ಶರಣು: ರಾಜಿ ಪಂಚಾತಿಗೆ ದೈವದ ಗುಡಿ ಬಳಿ ಕರೆದು ಕೊಲೆ ನಡೆಸಿದ್ದರೂ ಹಂತಕರು-ಕಹಳೆ ನ್ಯೂಸ್

ಮಂಗಳೂರು: ಕುಂಬ್ಳೆ ಪುತ್ತಿಗೆ ನಿವಾಸಿ ಸುದರ್ಶನ್ ಎಂಬ ಯುವಕನನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಿ ನಂತರ ತೊಕ್ಕೊಟ್ಟು ಸಮೀಪದ ಕಾಪಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾದ ಪ್ರಕರಣದ ಮತ್ತಿಬ್ಬರು ಆರೋಪಿಗಳು ಡಿ.೩ ರಂದು ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಡಿ.ಕೆ.ರಕ್ಷಿತ್ ಕೃತ್ಯ ನಡೆದ ಒಂದು ದಿನದ ಬಳಿಕ ಭಾನುವಾರ ಸಂಜೆ ಎಸಿಪಿಯವರ ವಿಶೇಷ ಪೊಲೀಸ್ ತಂಡಕ್ಕೆ ಶರಣಾಗಿದ್ದ.


ಡಿ.೩ ರಂದು ತೊಕ್ಕೊಟ್ಟು ಒಳ ಪೇಟೆಯ ಬೆನ್ನಿ ಕುಂಬಳೆಯ ರಾಕೇಶ್ ಹಾಗೂ ಪುತ್ತೂರಿನ ಜಿತ್ ಶರಣಾಗತರಾದ ಆರೋಪಿಗಳು. ಡಿ.ಕೆ. ರಕ್ಷಿತ್ ಗೆಳತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುದರ್ಶನ್ ಆಕೆಯ ವಿಡಿಯೋ ಚಿತ್ತೀಕರಿಸಿದ್ದೂ ಮಾತ್ರವಲ್ಲದೇ, ರೈಲಿನಲ್ಲಿ ಜತೆಯಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಮತೀಯ ಯುವಕನೊಂದಿಗೆ ಆಕೆ ಸಲುಗೆಯಿಂದ ಇದ್ದಾಳೆ ಎನ್ನುವ ಒಕ್ಕಣೆಯ ಪೋಸ್ಟ್ ನೊಂದಿಗೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ. ಈ ಬಗ್ಗೆ ಯುವತಿ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತನ್ನ ಗೆಳೆಯ ರಕ್ಷಿತ್ ಜತೆಯೂ ಈ ವಿಷಯ ಹಂಚಿಕೊ0ಡಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ರಕ್ಷಿತ್ ತನ್ನ ಸಹಚಾರರೊಂದಿಗೆ ಅಲ್ಲಿಂದ ಮಂಗಳೂರಿಗೆ ಆಗಮಿಸಿ, ಸುದರ್ಶನನ್ನು ಪ್ರಕರಣದ ಇತ್ಯರ್ಥಕ್ಕೆ ಕುತ್ತಾರ್ ಸಮೀಪದ ದೈವದ ಗುಡಿಗೆ ಕರೆದಿದ್ದ. ಕುಂಬಳೆಯಿAದ ತೊಕ್ಕೊಟ್ಟಿಗೆ ಬಸ್ಸ್ನಲ್ಲಿ ಆಗಮಿಸಿದ ಸುದರ್ಶನ್‌ನನ್ನು ಮಡ್ಯಾರ್ ಸಮೀಪದ ತನ್ನ ಬಾಡಿಗೆ ಮನೆಗೆ ಕರೆದೊಯಿದಿದ್ದ. ಅಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿ, ಬಳಿಕ ಸಮೀಪದ ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆಯ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದ. ಬಳಿಕ ಸ್ವತಃ ತಾನೇ ಪೊಲೀಸರಿಗೆ ಫೋನ್ ಮಾಡಿ ಕೊಲೆ ಕೃತ್ಯ ಹಾಗೂ ಮೃತ ದೇಹ ಎಸೆದಿರುವ ವಿಷಯ ತಿಳಿಸಿದ್ದ.
ಭಾನುವಾರ ಪೊಲೀಸರಿಗೆ ಶರಣಾದ ರಕ್ಷಿತ್ ಪೊಲೀಸರಿಗೆ ಈ ಎಲ್ಲಾ ವಿಚಾರಗಳನ್ನೂ ಒಪ್ಪಿಕೊಂಡಿದ್ದ. ಕೊಲೆ ಮಾಡುವ ಉದ್ದೇಶದಿಂದ ಕರೆ ತಂದ ಸಹಚರರ ಪೊಲೀಸರಿಗೆ ಶರಣಾಗಿದ್ದು ಉಲ್ಲಾಳ ಪೊಲೀಸರು  ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ನೆಹರೂ ನಗರದಲ್ಲಿ ಅಪರಿಚಿತ ಕಾರೊಂದು ಪತ್ತೆಯಾಗಿದ್ದೂ, ಆ ಕಾರಿಗೂ ಈ ಸಂಬ0ಧ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಬನ್ನೂರು ಕರ್ಮಲದ ಬಳಿಯ ವಾಟರ್ ಸರ್ವಿಸ್ ಸ್ಟೇಶನ್ ಸಮೀಪ ಮೆಸ್ಕಾಂ ಟವರ್ ಬಳಿ ಡಿ.೯ ರಂದು ಈ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ. ಆರೋಪಿಗಳು ರಕ್ತ ಸಿಕ್ತ ಮೃತ ದೇಹವನ್ನು ಕೊಲೆ ನಡೆದ ಜಾಗದಿಂದ ಕಾರಿನಲ್ಲಿ ತುಂಬಿಕೊ0ಡು ಬಂದು ಕಾಪಿಕಾಡ್‌ನಲ್ಲಿ ಬಿಸಾಡುವಾಗ ಈ ರಕ್ತದ ಕಲೆಗಳು ಆಗಿರಬಹುದು. ಬಳಿಕ ಆರೋಪಿಗಳು ಪರಾರಿಯಾಗುವ ಹಂತದಲ್ಲಿ ಕಾರನ್ನು ಕರ್ಮಲದಲ್ಲಿ ಬಿಟ್ಟು ಹೋಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.