Monday, January 20, 2025
ಸುದ್ದಿ

ಸಹೃದಯಿ ದಾನಿಗಳು ಮತ್ತು ಸಂಘಸಂಸ್ಥೆಗಳ ನೆರವಿನಿಂದ 4.50 ಲಕ್ಷ ರೂಪಾಯಿ ವೆಚ್ಚದ ಮನೆ ನಿರ್ಮಾಣ-ಕಹಳೆ ನ್ಯೂಸ್

ಶ್ರೀಮತಿ ಮೀನಾಕ್ಷಿ ಮತ್ತು ಗೋವಿಂದ ಕುಲಾಲ್ ನಗ್ರಿ ಇವರಿಗೆ ಸಹೃದಯಿ ದಾನಿಗಳು ಮತ್ತು ಸಂಘಸಂಸ್ಥೆಗಳ ನೆರವಿನಿಂದ ವಿಶ್ವಹಿಂದೂ ಪರಿಷದ್ ನಾಯಕ ಲೋಹಿತ್ ಪಣೋಲಿಬೈಲ್ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ರವಿಚಂದ್ರ ನಾಯ್ಕ್ ನಗ್ರಿ ಇವರ ವಿಶೇಷ ಮುತುವರ್ಜಿ ಮತ್ತು ಮುಂದಾಳತ್ವದಲ್ಲಿ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಭಾರತ ಮಾತೆಯ ಫೋಟೋ ನೀಡುವ ಮೂಲಕ ಹಸ್ತಾಂತರ ಮಾಡಲಾಯಿತು .


ಈ ಶುಭ ಸಂದರ್ಭದಲ್ಲಿ ಅತಿಥಿಗಳಾಗಿ ಸಜೀಪ ಜನಸೇವಾ ಟ್ರಸ್ಟ್’ನ ಅಧ್ಯಕ್ಷ ಯಶವಂತ ದೇರಾಜೆ, ಶ್ರೀ ದುರ್ಗಾ ಪರಮೇಶ್ವರೀ ಭಕ್ತವೃಂದ ಸಜೀಪ ಇದರ ಅಧ್ಯಕ್ಷ ನವೀನ್ ಸುವರ್ಣ ಮಿತ್ತಕಟ್ಟ, ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ, ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಬೆಳ್ಚಾಡ ಕೂಡೂರು, ಸ್ನೇಹ ಮಿಲನ ಕಲ್ಲಡ್ಕ ಇದರ ಸಂಚಾಲಕ ಪುರುಷೋತ್ತಮ ಪೂಜಾರಿ ಪಡೀಲ್, ವಿಶ್ವಹಿಂದೂ ಪರಿಷದ್ ವಿಟ್ಲ ಪ್ರಖಂಡದ ಸಹ ಕಾರ್ಯದರ್ಶಿ ಲೋಹಿತ್ ಪಣೋಲಿಬೈಲ್, ಸಾಮಾಜಿಕ ಕಾರ್ಯಕರ್ತ ರವಿಚಂದ್ರ ನಗ್ರಿ ಮತ್ತು ಹಿರಿಯರಾದ ಗುರುವಪ್ಪ ನಾಯ್ಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಣ ನಮಗೆ ಲಭಿಸಿದ್ದರಿಂದಾಗಿಯೆ ಈ ರೀತಿಯ ಸಮಾಜಮುಖಿ ಸದ್ಕಾರ್ಯಗಳನ್ನು ಮಾಡಲು ಪ್ರೇರಣೆ ಆಯಿತು, ಈ ನೂತನ ಮನೆಯಲ್ಲಿಯೂ ಸಮಾಜದ ಬಗ್ಗೆ ಕಾಳಜಿ ಮತ್ತು ರಾಷ್ಟ್ರೀಯ ಚಿಂತನೆ ಬೆಳೆದು ಸಮಾಜಕ್ಕೆ *ಮಾದರಿ ಮನೆಯಾಗಲಿ ಎಂಬ ಆಶಯದೊಂದಿಗೆ* ಭಾರತ ಮಾತೆ, ಡಾಕ್ಟರ್’ಜಿ, ಗುರೂಜಿಯವರ ಫೋಟೋ ನೀಡಿ ಮನೆ ಹಸ್ತಾಂತರ ಮಾಡಲಾಗಿದೆ ಎಂದು ಲೋಹಿತ್ ಪಣೋಲಿಬೈಲ್ ಇವರು ಈ ಸಂದರ್ಭದಲ್ಲಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಹಿಂದೂ ‌ಸಂಘಟನೆಯ ಹಲವಾರು ಕಾರ್ಯಕರ್ತರು ಊರಿನ ಸಜ್ಜನ ಬಂಧುಗಳು ಆಗಮಿಸಿ ಮನೆ ಮಂದಿಗೆ ಶುಭ ಹಾರೈಸಿದರು.